ಸುಳ್ಯ:ಪಿ.ಎಂ. ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ
ಇದು ಮನೆಗಳ ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್ (Rooftop Solar) ವ್ಯವಸ್ಥೆ ಅಳವಡಿಸಲು ಪ್ರೋತ್ಸಾಹಿಸುವ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಈ ಕುರಿತು ಸುಳ್ಯ ಮೆಸ್ಕಾಂ ಸಾರ್ವಜನಿಕರಿಗೆ ಮಾಹಿತಿ ನೀಡಿದೆ.ಸ್ಥಳೀಯ ಸೇವೆ ನೋಡಿ ಮನೆಗಳಲ್ಲಿ ಸೌರ ಫಲಕಗಳನ್ನು
ಅಳವಡಿಸುವುದು.ಸೌರ ಶಕ್ತಿಯಿಂದ ಮನೆಯ ವಿದ್ಯುತ್ ಅಗತ್ಯವನ್ನು ಪೂರೈಸುವುದು.ವಿದ್ಯುತ್ ಬಿಲ್ ಕಡಿಮೆ ಮಾಡುವುದು.ಅರ್ಹ ಕುಟುಂಬಗಳಿಗೆ ತಿಂಗಳಿಗೆ 300 ಯೂನಿಟ್ವರೆಗೆ ಉಚಿತ/ಕಡಿಮೆ ವೆಚ್ಚದ ವಿದ್ಯುತ್ ಪಡೆಯಲು ಸಹಾಯ ಮಾಡುವುದು. ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸಿ ಪರಿಸರ ಮಾಲಿನ್ಯ ಕಡಿಮೆ ಮಾಡುವುದು.
ಸರ್ಕಾರವು ಮನೆ ಮೇಲ್ಚಾವಣಿಯ ಸೌರ ವ್ಯವಸ್ಥೆ ಅಳವಡಿಸಲು ಕೇಂದ್ರ ಹಣಕಾಸು ಸಹಾಯ (ಸಬ್ಸಿಡಿ) ನೀಡುತ್ತದೆ. ಸೌರ ವ್ಯವಸ್ಥೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಸಬ್ಸಿಡಿಯ ಮೊತ್ತ ಬದಲಾಗುತ್ತದೆ.
ಮನೆಯ ಮೇಲ್ಚಾವಣಿಯಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ ಸೂರ್ಯನ ಬೆಳಕಿನಿಂದ ವಿದ್ಯುತ್ ಉತ್ಪಾದಿಸಿ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳಬಹುದಾಗಿದೆ.
ಈ ಯೋಜನೆ ಕುರಿತಾಗಿ ವಿದ್ಯುತ್ ಗ್ರಾಹಕರಿಗೆ ಮಾಹಿತಿ ನೀಡಲು ಹಾಗೂ ಸ್ಥಳದಲ್ಲೇ ಅರ್ಜಿ ನೋಂದಾಯಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಸೇವಾ ಸೇತು ಎಂಬ ಕಾರ್ಯಕ್ರಮವನ್ನು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯಲ್ಲಿ ಅ.14ರಿಂದ 16ರ ತನಕ ಸುಳ್ಯ ಮೆಸ್ಕಾಂ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಅನುಮೋದಿತ ಸೋಲಾರ್ ಮಾರಾಟಗಾರರು ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಹಾಜರಿರುವವರಿದ್ದು ಕ್ರಮವಾಗಿ ಸೋಲಾರ್ ಘಟಕ ಸ್ಪಾಪನೆ ಮತ್ತು ಸಾಲ ಸೌಲಭ್ಯ ದ ಕುರಿತಾಗಿಯೂ ಮಾಹಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸುಳ್ಯ ಮೆಸ್ಕಾಂ ಕಚೇರಿಯನ್ನು ಸಂಪರ್ಕಿಸಬಹುದು.










