ಮುಂಬೈ:ರೋಹಿತ್ ಶರ್ಮಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2027ರ ಆವೃತ್ತಿಯಲ್ಲಿ ತಂಡ ಮುನ್ನಡೆಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಶುಕ್ರವಾರ ಘೋಷಿಸಿದೆ.2013ರಿಂದ 2023ರ ವರೆಗೆ ತಂಡ ಮುಂಬೈ ಪಡೆಯನ್ನು
ಮುನ್ನಡೆಸಿದ್ದ ರೋಹಿತ್, ಐದು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. 2024-2026ರವರೆಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ತಂಡದ ಸಾರಥ್ಯ ನೀಡಲಾಗಿತ್ತು. ಈ ಅವಧಿಯಲ್ಲಿ ಆಡಿದ ಮೂರೂ ಆವೃತ್ತಿಗಳಲ್ಲಿ ಮುಂಬೈ ಪಡೆ ನಿರೀಕ್ಷಿತ ಆಟ ಆಡುವಲ್ಲಿ ವಿಫಲವಾಗಿತ್ತು. ಹೀಗಾಗಿ, ಈ ಹಾರ್ದಿಕ್ ಅವರನ್ನು ತಂಡದಿಂದಲೇ ಕೈಬಿಟ್ಟಿರುವ ಮುಂಬೈ, ಹಳೇ ನಾಯಕನಿಗೆ ಮತ್ತೆ ತಂಡದ ಹೊಣೆ ನೀಡಿದೆ. ಐಪಿಎಲ್ನಲ್ಲಿ
ನಾಯಕನಾಗಿ ಅತಿಹೆಚ್ಚು ಪಂದ್ಯಗಳಿಗೆ ತಂಡ ಮುನ್ನಡೆಸಿದವರ ಪಟ್ಟಿಯಲ್ಲಿ ರೋಹಿತ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 158 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದು,87ರಲ್ಲಿ ಜಯ ಸಾಧಿಸಿದ್ದಾರೆ. 67 ಸೋಲು ಎದುರಾಗಿದ್ದು, ನಾಲ್ಕು ಪಂದ್ಯಗಳು ಟೈ ಆಗಿವೆ.ಈ ಲೀಗ್ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಸಾಲಿನಲ್ಲೂ ರೋಹಿತ್ ಎರಡನೇ ಸ್ಥಾನದಲ್ಲಿದ್ದಾರೆ. 281 ಪಂದ್ಯಗಳಲ್ಲಿ 276 ಇನಿಂಗ್ಸ್ಗಳಿಂದ ಆಡಿರುವ ಅವರು 7,329 ರನ್ ಕಲೆಹಾಕಿದ್ದಾರೆ. 2 ಶತಕ ಹಾಗೂ 49 ಅರ್ಧಶತಕ ಸಿಡಿಸಿದ್ದಾರೆ.















