ಸುಳ್ಯ:ಶುಕ್ರವಾರ ರಾತ್ರಿ ಸುಳ್ಯದಲ್ಲಿ ಮಳೆಯಾಗಿದೆ. 8.30ರ ಬಳಿಕ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆ ಸುರಿದಿದೆ. ಸುಳ್ಯ ನಗರ ಸೇರಿ ತಾಲೂಕಿನ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ಕೆಲವೆಡೆ
ಉತ್ತಮ ಮಳೆಯಾದರೆ, ಕೆಲವು ಕಡೆ ಸಾಧಾರಣ ಮಳೆಯಾಗಿದೆ.
ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಇತ್ತು.
ಬುಧವಾರ ರಾತ್ರಿ ಸುಳ್ಯದಲ್ಲಿ ಗುಡುಗು, ಸಿಡಿಲಿನ ಅಬ್ಬರ, ಗಾಳಿಯೊಂದಿಗರ ಉತ್ತಮ ಮಳೆಯಾಗಿತ್ತು. ಒಂದು ದಿನದ ಬಳಿಕ ಮತ್ತೆ ಮಳೆಯಾಗಿದೆ.ಸುಮಾರು 15 ದಿನಗಳಿಂದ ಮಳೆ ದೂರವಾಗಿತ್ತು.ಮಂಜು ಕವಿದ ಮತ್ತು ಚಳಿಯ ವಾತಾವರಣ ಇತ್ತು. ಇದೀಗ ಮತ್ತೆ ಕೆಲ ದಿನಗಳಿಂದ ಮಳೆ ಸುರಿಯುತಿದೆ. ಮೋಡ, ಮಳೆ ಬಂದ ಕಾರಣ ಚಳಿ ದೂರವಾಗಿ ಸೆಕೆಯ ವಾತಾವರಣ ಉಂಟಾಗಿತ್ತು. ಇದೀಗ ಮಳೆ ಸುರಿದು ತಂಪೆರೆದಿದೆ.















