ಪಂಜ:ಜೇಸಿಐ ಪಂಜ ಪಂಚಶ್ರೀಯ ವತಿಯಿಂದ ಡಿ.6 ರಿಂದ ಡಿ.10 ರವರೆಗೆ ನಡೆಯುವ ಜೇಸಿ ಸಪ್ತಾಹ – 2026’ರ ಆಮಂತ್ರಣ ಪತ್ರಿಕೆಗೆ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಪಂಜದಲ್ಲಿ ಪೂಜೆ ಸಲ್ಲಿಸಲಾಯಿತು .ಈ ಸಂದರ್ಭದಲ್ಲಿ
ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್ , ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷ ದೇವಿಪ್ರಸಾದ್ ಚಿಕ್ಮುಳಿ ಕಾರ್ಯದರ್ಶಿ ಪ್ರಕಾಶ್ ಅಳ್ಪೆ ಉಪಸ್ಥಿತರಿದ್ದರು. ಬಳಿಕ ದ.ಕ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ರಾಜ್ಯ ಸಹಕಾರಿ ರತ್ನ ಪುರಸ್ಕೃತರಾದ ಜಾಕೆ ಮಾಧವ ಗೌಡ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಎಂ.ಬಿ.ಸದಾಶಿವ, ಡಾ.ದೇವಿಪ್ರಸಾದ್ ಕಾನತ್ತೂರ್,ಜೇಸಿಐ ಪಂಜ ಪಂಚಶ್ರೀಯ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ ಹಾಗೂ ಘಟಕದ ಪೂರ್ವಾಧ್ಯಕ್ಷರು , ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು .















