ನವದೆಹಲಿ: ಸಂಜು ಸಾಮ್ಯನ್ಸ್ ಅವರ ಸ್ಫೋಟಕ ಅರ್ಧಶತಕದ (87 ರನ್, 57 ಎಸೆತ) ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳ
ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 155 ರನ್ ಪೇರಿಸಿತು.ಈ ಗುರಿಯನ್ನು 17.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ ಚೆನ್ನೈ ಗೆಲುವಿನ ನಗೆ ಬೀರಿತು.ಸಂಜು 52 ಎಸೆತಗಳಲ್ಲಿ 7 ಬೌಂಡರಿ 6 ಸಿಕ್ಸರ್ ನೆರವಿನಿಂದ ಅಜೇಯ 87 ರನ್ ಚಚ್ಚಿದರು. ಸಂಜುಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಕಾರ್ತಿಕ್ ಶರ್ಮಾ ಸಾಥ್ ನೀಡಿದರು. 31 ಎಸೆತಗಳಲ್ಲಿ 4 ಬೌಂಡರಿ,2 ಸಿಕ್ಸರ್ ಸಹಿತ 41 ರನ್ ಬಾರಿಸಿ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ದರು.
ಡೆಲ್ಲಿ ಪರ ಟ್ರಿಸ್ಟನ್ ಸ್ಟಬ್ಸ್ (38; 31ಎ, 4X1, 2X6) ಮತ್ತು ಸಮೀರ್ ರಿಜ್ವಿ (ಔಟಾಗದೇ 40; 24ಎ, 6X4) ಅವರು ತಂಡಕ್ಕೆ ಚೇತರಿಕೆ ನೀಡಿದರು. ಯಶಸ್ವಿಯಾದರು. ಇವರಿಬ್ಬರೂ ಆರನೇ ವಿಕೆಟ್ ಜೊತೆಯಾಟದಲ್ಲಿ 65 (47ಎ) ರನ್ ಸೇರಿಸಿದರು.
ಚೆನ್ನೈ ಪರ ನೂರ್ ಅಹಮ್ಮದ್ 2 ವಿಕೆಟ್ ಕಬಳಿಸಿದರು.












