ಸುಳ್ಯ: ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಳವಾರ ರಾತ್ರಿ ಮಳೆಯಾಗಿದೆ. ಸುಳ್ಯ ನಗರ ಸೇರಿದಂತೆ ಸುಳ್ಯ ತಾಲೂಕಿನ ವಿವಿಧೆಡೆಗಳಲ್ಲಿ ಸಾಧಾರಣ ಮಳೆ ಸುರಿಸಿದಿದೆ.ಕೆಲವೆಡೆ ತುಂತುರು ಮಳೆಯಾಗಿದೆ. ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣವಿದ್ದು ರಾತ್ರಿಯ ವೇಳೆಗೆ
ಮಳೆ ಸುರಿದಿದೆ. ಕೆಲವೆಡೆ ಗುಡುಗು ಸಿಡಿಲು ಸಹೀತ ಸಾಧಾರಣ ಮಳೆ ಸುರಿದಿದೆ.ಭಾರೀ ಸೆಕೆ ಮತ್ತು ಏರಿದ ಉಷ್ಣಾಂಶದ ವಾತಾವರಣದಿಂದ ಜನರು ಬಸವಳಿದಿದ್ದರು. ಇದೀಗ ಮಳೆ ಸುರಿದು ತಂಪೆರೆದಿದೆ.
ಕರಾವಳಿ ಹಾಗೂ ಒಳನಾಡಿನ ಕೆಲ ಪ್ರದೇಶದಲ್ಲಿ ಮುಂದಿನ ಕೆಲವು ದಿನಗಳ ಕಾಲ ಗುಡುಗು ಸಹೀತ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.












