ನವದೆಹಲಿ: ಬಿಹಾರದ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಇಂದು ಘೋಷಿಸುವುದಾಗಿ ಭಾರತೀಯ ಚುನಾವಣಾ ಆಯೋಗ ಹೇಳಿದೆ.
ಇಂದು ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಚುನಾವಣಾ ದಿನಾಂಕ ಮತ್ತು ಇತರ ಮಾಹಿತಿಗಳನ್ನು
ಪ್ರಕಟಿಸುವುದಾಗಿ ಆಯೋಗದ ಪ್ರಕಟಣೆ ತಿಳಿಸಿದೆ.ಬಿಹಾರದಲ್ಲಿ ಸೆ.30ರಂದು ಆಯೋಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯನ್ನು (ಎಸ್ಐಆರ್) ಪೂರ್ಣಗೊಳಿಸಿದೆ.ಎಸ್ಐಆರ್ನ ಕೊನೆಯ ಪಟ್ಟಿಯ ಪ್ರಕಾರ, ಒಟ್ಟು 7.42 ಕೋಟಿ ಮತದಾರರು ಇದ್ದಾರೆ.243 ಸದಸ್ಯ ಬಲದ ಬಿಹಾರ ರಾಜ್ಯ ವಿಧಾನಸಭೆಯ ಅವಧಿ ನವೆಂಬರ್ 22 ರಂದು ಕೊನೆಗೊಳ್ಳಲಿದೆ.















