ನವದೆಹಲಿ:ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲಾದ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಹಿಂದಿನ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುತ್ತದೆ ಎಂದು ಭಾವಿಸಿದ್ದೆ. ಆದರೆ, ಅದು ಈ ಅವಕಾಶವನ್ನು ಕೈಚೆಲ್ಲಿದೆ ಎಂದು ಹೇಳಿದ್ದಾರೆ.ಮಹಿಳಾ ಮೀಸಲಾತಿ ಮಸೂದೆ ಜಾರಿ ಮಾಡಲು ಸಾಧ್ಯವಾಗದ ಬಗ್ಗೆ ದೇಶದ ಮಹಿಳೆಯರಲ್ಲಿ
ಕ್ಷಮೆಯಾಚಿಸುತ್ತೇನೆ ಎಂದ ಅವರು, ಸಂಸತ್ತಿನಲ್ಲಿ ಮಸೂದೆಯನ್ನು ಹೇಗೆ ಹತ್ತಿಕ್ಕಲಾಯಿತು ಎಂಬುದನ್ನು ದೇಶದ ಪ್ರತಿಯೊಬ್ಬ ನಾಗರಿಕನೂ ನೋಡಿದ್ದಾರೆ ಎಂದರು. ಮಹಿಳಾ ಮೀಸಲಾತಿ ವಿಷಯ ಬಂದಾಗ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ತಮ್ಮ ನಿಜವಾದ ಮುಖವನ್ನು ತೋರಿಸಿವೆ. ಬಹಳ ದಿನಗಳಿಂದ ಮಹಿಳೆಯರಿಗೆ ನೀಡಬೇಕಾಗಿದ್ದ ಹಕ್ಕನ್ನು ಈ ಮಸೂದೆ ನೀಡುತ್ತಿತ್ತು. ಮಸೂದೆಯು ಎಲ್ಲ ರಾಜ್ಯಗಳಿಗೆ ದೊಡ್ಡ ಧ್ವನಿಯಾಗುತ್ತಿತ್ತು. ತಿದ್ದುಪಡಿ ಮಸೂದೆಯು ಮಹಿಳಯರಿಗೆ ಹಕ್ಕು
ನೀಡುತ್ತಿತ್ತು. ಅವರಿಗಿದ್ದ ಅಡೆತಡೆ ನಿವಾರಿಸುತ್ತಿತ್ತು. ಮಹಿಳೆಯರ ಆಕಾಂಕ್ಷೆಗಳ ವಿರುದ್ಧ ವಿಪಕ್ಷಗಳು ಮಹಾಯಜ್ಞ ನಡೆಸಿದವು ಎಂದು ಹೇಳಿದರು.ಸ್ವಾರ್ಥ ರಾಜಕೀಯಕ್ಕಾಗಿ ಕಾಂಗ್ರೆಸ್, ಡಿಎಂಕೆ ಮತ್ತು ಎಸ್ಪಿ ಮಹಿಳಾ ಹಕ್ಕುಗಳನ್ನು ನಿರ್ಲಕ್ಷಿಸಿದೆ. ವಿರೋಧ ಪಕ್ಷಗಳು ‘ನಾರಿ ಶಕ್ತಿ’ಯನ್ನು ಲಘುವಾಗಿ ಪರಿಗಣಿಸುತ್ತಿವೆ.ನಾವು ರಾಷ್ಟ್ರದ ಜನರೊಂದಿಗಿದ್ದೇವೆ. ಆದರೆ, ಕೆಲವರು ರಾಜಕೀಯ ಪ್ರಯೋಜನಗಳ ಬಗ್ಗೆ ಮಾತ್ರ ಯೋಚಿಸುತ್ತಾರೆ
ಮಹಿಳಾ ಮೀಸಲಾತಿ ಬಗ್ಗೆ ದೇಶದ ವಿವಿಧೆಡೆಯಿಂದ ಮಹಿಳೆಯರು ನನಗೆ ಪತ್ರ ಬರೆದಿದ್ದರು. ಮಹಿಳಾ ಮೀಸಲಾತಿಗಾಗಿ ದಶಕಗಳಿಂದ ಹೋರಾಟ ನಡೆಸಿದ್ದೇವೆ ಎಂದರು.
















