ಆಲಪ್ಪುಳ: ಕೇರಳ ರಾಜ್ಯದ ‘ತಿರುವೋಣಂ ಬಂಪರ್’ ಲಾಟರಿಯ ಪ್ರಥಮ ಬಹುಮಾನ 25 ಕೋಟಿ ಬಹುಮಾನ ಗೆದ್ದ ಅದೃಷ್ಟಶಾಲಿ
ಆಲಪ್ಪುಳ ಜಿಲ್ಲೆಯ ಶರತ್ ಎಸ್. ನಾಯರ್. ಆಲಪ್ಪುಳ ಜಿಲ್ಲೆಯ ಥೈಕಾಟ್ಟುಶ್ಶೇರಿ ನಿವಾಸಿ ಶರತ್ ನಾಯರ್ ಅವರು ಖರೀದಿಸಿದ
TH 577825 ಎಂಬ ಅಂಕಿಯ ಟಿಕೆಟ್ಗೆ
ಬಂಪರ್ ಅದೃಷ್ಟ ಒಲಿದು ಬಂದಿದೆ.ಲತೀಶ್ ಒಡೆತನದ ಲಾಟರಿ ಏಜೆನ್ಸಿಯಿಂದ ಶರತ್ ಟಿಕೆಟ್ ಖರೀಸಿದ್ದರು. ಇದೀಗ ಬಂಪರ್ ಬಹುಮಾನದ ಟಿಕೆಟ್ ಅನ್ನು ತುರವೂರ್ನ ಎಸ್ಬಿಐ ಬ್ಯಾಂಕ್ಗೆ ಸಲ್ಲಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡುತ್ತಿರುವ ಶರತ್ ನಾಯರ್
ಅಕ್ಟೋಬರ್ 4ರಂದು ಫಲಿತಾಂಶ ಹೊರಬಿದ್ದಿತ್ತು. ‘ನನಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಮನೆಗೆ ಹೋಗಿ ಲಾಟರಿ ಟಿಕೆಟ್ ಪರಿಶೀಲಿಸಿದಾಗ ಬಂಪರ್ ಬಹುಮಾನ ಗೆದ್ದಿರುವ ಬಗ್ಗೆ ಖಚಿತವಾಯಿತು’ ಎಂದು ಹೇಳಿದ್ದಾರೆ.ನಾನು ವಿರಳವಾಗಿ ಲಾಟರಿ ಟಿಕೆಟ್ಗಳನ್ನು ಖರೀದಿಸುತ್ತೇನೆ. ಬಂಪರ್ ಟಿಕೆಟ್ ಖರೀದಿಸಿದ್ದು ಇದೇ ಮೊದಲು ಎಂದು ಹೇಳುತ್ತಾರೆ ಪೆಯಿಂಟ್ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಶರತ್.















