ಮುಂಬೈ:ತಂಡಕ್ಕೆ ಮರಳಿದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮ ಮತ್ತು ರಯಾನ್ ರಿಕೆಲ್ಟನ್ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಲಖನೌ ಸೂಪರ್ಜೈಂಟ್ಸ್ ವಿರುದ್ಧ 6 ವಿಕೆಟ್ಗಳ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಎಲ್ಎಸ್ಜಿ ತಂಡವು 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮುಂಬೈ
18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಮುಂಬೈ ಪರ ರೋಹಿತ್ ಶರ್ಮ ಮತ್ತು ರಿಕೆಲ್ಟನ್ ಸ್ಪೋಟಕ ಆರಂಭ ನೀಡಿದರು. ರೋಹಿತ್ 44 ಎಸೆತಗಳಲ್ಲಿ 6 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 84 ರನ್ ಬಾರಿಸಿದರೆ,ರಿಕೆಲ್ಟನ್ ಕೇವಲ 32 ಎಸೆತಗಳಲ್ಲಿ 6 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 83 ರನ್ ಚಚ್ಚಿದರು. ಇವರಿಬ್ಬರು ಮೊದಲ ವಿಕೆಟ್ಗೆ 10.5 ಓವರ್ಗಳಲ್ಲಿ 143 ರನ್ ಬಾರಿಸಿದರು. ನಮನ್ ಧೀರ್ 23 (12 ಎಸೆತ 3 ಬೌಂಡರಿ, 1 ಸಿಕ್ಸರ್) ರನ್ ಗಳಿಸಿದರು.
ಮೊದಲು ಬ್ಯಾಟ್ ಮಾಡಿದ ಲಖನೌ ಪರ ಮಿಚೆಲ್ ಮಾರ್ಷ್ (44 ರನ್: 25 ಎಸೆತ 4 ಬೌಂಡರಿ ಹಾಗೂ 3 ಸಿಕ್ಸರ್ )ಹಾಗೂ ನಿಕೋಲಸ್ ಪೂರನ್ (63 ರನ್: 21 ಎಸೆತ 1 ಬೌಂಡರಿ ಹಾಗೂ 8 ಸಿಕ್ಸರ್ ) ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಡೆತ್ ಓವರ್ನಲ್ಲಿ ಮಾರ್ಕ್ರಮ್ (31 ರನ್: 25 ಎಸೆತ 1 ಬೌಂಡರಿ ಹಾಗೂ 1 ಸಿಕ್ಸರ್), ಹಿಮ್ಮತ್ ಸಿಂಗ್ (40 ರನ್: 31 ಎಸೆತ, 2 ಬೌಂಡರಿ ಹಾಗೂ 2 ಸಿಕ್ಸರ್) ತಂಡದ ಮೊತ್ತವನ್ನು 225 ರನ್ ಗಡಿ ದಾಟಿಸಿದರು.












