ಸುಳ್ಯ:ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ನೇತೃತ್ವದಲ್ಲಿ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಹಕಾರದಲ್ಲಿ ಯುವಜನ ಸಂಯುಕ್ತ ಮಂಡಳಿ ಮೈದಾನದಲ್ಲಿ ಒಂದು ವಾರಗಳ ಕಾಲ ನಡೆಯುವ ವಾಲಿಬಾಲ್ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ನ
ಕೋಶಾಧಿಕಾರಿ ಇಬ್ರಾಹಿಂ ಗೂನಡ್ಕ ಶಿಬಿರವನ್ನು ಉದ್ಘಾಟಿಸಿದರು.ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಎನ್.ಜಯಪ್ರಕಾಶ್ ರೈ ಮುಖ್ಯ ಅತಿಥಿಯಾಗಿದ್ದರು.ಸುಳ್ಯ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ

ಡಾ.ಪ್ರಶಾಂತ್ ಕೋಟಕ್ಕಲ್,ಪವನ್ ಪಲ್ಲತ್ತಡ್ಕ, ಎಸ್.ಸಂಶುದ್ದೀನ್, ಕೆ.ಗೋಕುಲ್ ದಾಸ್,ದೀಪಕ್ ಕುತ್ತಮೊಟ್ಟೆ,ರಾಧಾಕೃಷ್ಣ ಮಾಣಿಬೆಟ್ಟು,ವಾಲಿಬಾಲ್ ರಾಷ್ಟ್ರೀಯ ತರಬೇತುದಾರ ಮನೋಜ್ ಅಡ್ಕಾರು,ಶರತ್ ಅಡ್ಕಾರು, ಹರೀಶ್ ಉಬರಡ್ಕ, ರಝಾಕ್ ಸುಳ್ಯ, ಸುದರ್ಶನ್ ನಾವೂರು,ಮುರಳಿ ನಳಿಯಾರು,ಪ್ರವೀಣ್ ಜಯನಗರ, ಮಂಜುನಾಥ್ ಐವರ್ನಾಡು,ನಿತಿನ್ ಸುಳ್ಯ, ವಿಜಯಕುಮಾರ್ ಆಲೆಟ್ಟಿ, ಮನಮೋಹನ್ ಪುತ್ತಿಲ ಮೊದಲಾದವರಿದ್ದರು.
ದೊಡ್ಡಣ್ಣ ಬರೆಮೇಲು ಸ್ವಾಗತಿಸಿ, ಭವಾನಿಶಂಕರ ಕಲ್ಮಡ್ಕ ವಂದಿಸಿದರು.ಎಂ.ಜೆ. ಶಶಿಧರ್ ಕಾರ್ಯಕ್ರಮ ನಿರೂಪಿಸಿದರು.ಮೇ.11ರ ತನಕ ಶಿಬಿರ ನಡೆಯಲಿದೆ.












