ನಗೋಯಾ:ಏಷ್ಯನ್ ಗೇಮ್ಸ್ ಕ್ರೀಡಾಕೂಟದ 4×400 ಮಿಶ್ರ ರಿಲೇಯಲ್ಲಿ ಭಾರತದ ಕ್ರೀಡಾಪಟುಗಳು ಬೆಳ್ಳಿ ಪದಕ ಗೆದ್ದಿದ್ದಾರೆ. 10,000 ಮೀ. ಓಟದ ಸ್ಪರ್ಧೆಯ ಫೈನಲ್ನಲ್ಲಿ ಸೀಮಾ ಕುಮಾರಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.ಪೂವಮ್ಮ ರಾಜು, ವಿಶಾಲ್ ತೆನ್ನರಸು, ವಿತ್ಯಾ ರಾಮರಾಜ್ ಮತ್ತು ಮನು ಟಿ.ಎಸ್. ಅವರನ್ನೊಳಗೊಂಡ ಭಾರತದ
ಮಿಶ್ರ ರಿಲೇ ತಂಡವು, 3:14.46 ನಿಮಿಷಗಳಲ್ಲಿ ಗುರಿ ಮುಟ್ಟುವ ಮೂಲಕ ಬೆಳ್ಳಿ ಪದಕ ಗೆದ್ದಿತು.10,000 ಮೀ. ಓಟವನ್ನು ಸೀಮಾ 32:50.05 ನಿಮಿಷಗಳಲ್ಲಿ ಪೂರ್ಣಗೊಳಿಸುವ ಮೂಲಕ ಕಂಚು ಗೆದ್ದರು.
ಭಾರತದ ಅನಂತ್ ಜೀತ್ ಸಿಂಗ್ ನರೂಕಾ ಮತ್ತು ಪರಿನಾಝ್ ಧಲಿವಾಲ್ ಅವರ ಜೋಡಿಯು ಸ್ಕೀಟ್ ಶೂಟಿಂಗ್ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಜಯಿಸಿತು.ಗುರುವಾರ ನಡೆದ
ಫೈನಲ್ನಲ್ಲಿ 44 ಅಂಕ ಗಳಿಸಿದ ತಂಡವು ಮೂರನೇ ಸ್ಥಾನ ಪಡೆಯಿತು.
ಬುಧವಾರ ಭಾರತದ ಪುರುಷ ಮತ್ತು ಮಹಿಳೆಯರ ಸ್ಕೀಟ್ ತಂಡಗಳು ಕಂಚಿನ ಪದಕ ಜಯಿಸಿದ್ದವು. ಶೂಟಿಂಗ್ ವಿಭಾಗದಲ್ಲಿ ಇದುವರೆಗೆ ಭಾರತಕ್ಕೆ ಒಟ್ಟು ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳು ಒಲಿದಿವೆ.
ಭಾರತ ಇದುವರೆಗೆ ಒಟ್ಟು 17 ಪದಕ ಗಳಿಸಿದೆ.







