ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್, ದಕ್ಷಿಣ ಕನ್ನಡ ಜಿಲ್ಲೆ–2 ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ , ದಕ್ಷಿಣ ಕನ್ನಡ ಜಿಲ್ಲೆ–2ರ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ದುಶ್ಚಟ ಮುಕ್ತ ಸಮಾಜಕ್ಕಾಗಿ ‘ಗಾಂಧಿ ಸಂಸ್ಕೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ’ ಅ. 5ರಂದು ಸುಳ್ಯದ ಕೇರ್ಪಳದ
ಬಂಟರ ಭವನದಲ್ಲಿ ನಡೆಯಲಿದೆ.ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಸುಳ್ಯದ ಶ್ರೀ ಚೆನ್ನಕೇಶವ ದೇವಳದಲ್ಲಿ ಸೆ.24 ರಂದು ನಡೆಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ಎನ್.ಎ. ರಾಮಚಂದ್ರ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಜನಜಾಗೃತಿ ವೇದಿಕೆಯ
ಮಾಜಿ ತಾಲೂಕು ಅಧ್ಯಕ್ಷ ಭವಾನಿಶಂಕರ ಅಡ್ತಲೆ, ಯೋಜನಾಧಿಕಾರಿ ಮಾಧವ ಗೌಡ, ಮೇಲ್ವಿಚಾರಕ ದಿನೇಶ್ ಡಿ., ಭಜನಾ ಪರಿಷತ್ ಸುಳ್ಯ ವಲಯ ಅಧ್ಯಕ್ಷೆ ಸವಿತಾ ಸಂದೇಶ್, ಪ್ರಮುಖರಾದ ಕೃಪಾಶಂಕರ ತುದಿಯಡ್ಕ, ಹರಿಪ್ರಸಾದ್, ಸುಬ್ಬ ಪಾಟಾಳಿ,ಮಲ್ಲೇಶ್ ಬೆಟ್ಟಂಪಾಡಿ, ವಿಜಯಕುಮಾರ್ ಉಬರಡ್ಕ,ಪದ್ಮನಾಭ ಶೆಟ್ಟಿ, ಭಾಸ್ಕರ ಅಡ್ಕಾರ್, ಮನೋಹರ್.ಕೆ ಉಪಸ್ಥಿತರಿದ್ದರು.







