ಡಲಾಸ್:ಫಿಫಾ ವಿಶ್ವಕಪ್ ಪುಟ್ಬಾಲ್ ಗ್ರೂಪ್ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡ ಜೋರ್ಡಾನ್ ವಿರುದ್ಧ 3-0 ಅಂತರದ ಗೆಲುವು ಸಾಧಿಸಿತು. ಈ ಮೂಲಕ ಗ್ರೂಪ್ ಹಂತದ ಮೂರು ಪಂದ್ಯದಲ್ಲಿ ಜಯ ಗಳಿಸಿ 9 ಅಂಕಗಳೊಂದಿಗೆ
ಅರ್ಜೆಂಟೀನಾ ನಾಕೌಟ್ನೆಡೆಗೆ ಮುನ್ನಡೆಯಿತು. ಜಿಯೋವಾನಿ ಲೋಸೆಲ್ಸೊ(19ನೇ ನಿಮಿಷ), ಲೌಸಾರೊ ಮಾರ್ಟಿನೆಸಸ್(31ನೇ ನಿಮಿಷ), ಲಿಯೋನೆಲ್ ಮೆಸ್ಸಿ(81ನೇ ನಿಮಿಷ) ಅರ್ಜೆಂಟೀನಾ ಪರ ಗೋಲು ಬಾರಿಸಿದರು. ಜೋರ್ಡಾನ್ ಪರ ಮೂಸಾ ಅಲ್ತಮಾರಿ (55ನೇ ನಿಮಿಷ) ಗೊಲು ಬಾರಿಸಿದರು. ಬದಲಿ ಆಟಗಾರನಾಗಿ ಮೆಸ್ಸಿ 60ನೇ ನಿಮಿಷ ಅಂಕಣಕ್ಕೆ ಇಳಿದರು. ಈ ವಿಶ್ವಕಪ್ನಲ್ಲಿ ಮೆಸ್ಸಿ ಬಾರಿಸಿದ ಗೋಲುಗಳ ಸಂಖ್ಯೆ ಆರಕ್ಕೇರಿದೆ.
ಪೋರ್ಚುಗಲ್ ಮತ್ತು ಕೊಲಂಬಿಯಾ ಮಧ್ಯೆ ನಡೆದ ಪಂದ್ಯ(0-0) ಡ್ರಾದಲ್ಲಿ ಕೊನೆಗೊಂಡಿತು. ಕೊಲಂಬಿಯಾ ಹಾಗು ಪೋರ್ಚುಗಲ್ ತಂಡಗಳು ನಾಕೌಟ್ ಪ್ರವೇಶಿಸಿದೆ.
ಎಲ್ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ 2-0 ಗೋಲುಗಳ ಅಂತರದಲ್ಲಿ ಪನಾಮ ತಂಡವನ್ನು ಮಣಿಸಿತು. ಜೂಡ್ ಬೆಲ್ಲಿಂಗ್(62 ನೇ ನಿಮಿಷ), ಹ್ಯಾರಿ ಕೇನ್(67ನೇ ನಿಮಿಷ) ಇಂಗ್ಲೆಂಡ್ ಪರ ಗೋಲು ಬಾರಿಸಿದರು. 7 ಅಂಕಗಳೊಂದಿಗೆ ಇಂಗ್ಲೆಂಡ್ ನಾಕೌಟ್ ಹಂತಕ್ಕೆ ಪ್ರವೇಶಿಸಿತು.
ಇನ್ನೊಂದು ಪಂದ್ಯದಲ್ಲಿ ಘಾನಾ ತಂಡವನ್ನು 2-1 ಅಂತರದಲ್ಲಿ ಪರಾಭವಗೊಳಿಸಿದ ಕ್ರೊಯೇಷಿಯಾ ನಾಕೌಟ್ ಪ್ರವೇಶಿಸಿದೆ.






