ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧ ಕೊನೆಗೊಳಿಸುವ ಶಾಂತಿ ಒಪ್ಪಂದದ ಅಂಶಗಳನ್ನು ಅಂತಿಮಗೊಳಿಸಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.ಇರಾನ್ ಜೊತೆಗಿನ ಒಪ್ಪಂದ ಅಂತಿಮಗೊಂಡಿದೆ.ಎಲ್ಲರಿಗೂ ಅಭಿನಂದನೆ ಗಳು’ ಎಂದು ಅವರು ತಮ್ಮ
ಒಡೆತನದ ಸಾಮಾಜಿಕ ಮಾಧ್ಯಮ ‘ಟ್ರೂಥ್ ಸೋಷಿಯಲ್’ನಲ್ಲಿ ಬರೆದು ಕೊಂಡಿದ್ದಾರೆ. ಆ ಮೂಲಕ, ಜಾಗತಿಕವಾಗಿ ತಲೆದೋರಿದ್ದ ಇಂಧನ ಬಿಕ್ಕಟ್ಟು ಕೊನೆಯಾಗುವ ನಿರೀಕ್ಷೆ ಹೆಚ್ಚಿದೆ.‘ಹೊರ್ಮುಜ್ ಜಲಸಂಧಿ ಶುಲ್ಕರಹಿತ ಸಂಚಾರಕ್ಕೆ ಮುಕ್ತಗೊಳ್ಳುವುದು ಮತ್ತು ಇರಾನ್ ಬಂದರುಗಳ ಮೇಲೆ ಅಮೆರಿಕ ನೌಕಾ ಪಡೆಯ ದಿಗ್ಬಂಧನವನ್ನು ತೆರವುಗೊಳಿಸುವುದಕ್ಕೆ ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಒಪ್ಪಂದಕ್ಕೆ ಜೂನ್ 19ರಂದು ಅಧಿಕೃತ ಸಹಿ ಬೀಳಲಿದೆ ಎಂದು ಅವರು ಹೇಳಿದ್ದಾರೆ.ಒಪ್ಪಂದಕ್ಕೆ ಸಹಿ ಹಾಕಲು ಸ್ವಿಟ್ಜರ್ಲೆಂಡ್ಗೆ ತೆರಳಲಿರುವ ಅಮೆರಿಕದ ನಿಯೋಗದ ನೇತೃತ್ವ ವನ್ನು ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ವಹಿಸಲಿದ್ದಾರೆ ಎಂದು ಟ್ರಂಪ್ ತಿಳಿಸಿದರು.








