ಅಟ್ಲಾಂಟಾ: ಫಿಫಾ ವಿಶ್ವಕಪ್ ಗ್ರೂಪ್ ‘ಹೆಚ್’ನಲ್ಲಿ ಬಲಿಷ್ಠ ಸ್ಪೇನ್ ಮತ್ತು ವಿಶ್ವಕಪ್ಗೆ ಚೊಚ್ಚಲ ಪ್ರವೇಶ ಪಡೆದ ಕೇಪ್ ವರ್ಡಿ ಮಧ್ಯೆ ನಡೆದ ಪಂದ್ಯ ಗೋಲು ರಹೀತ ಡ್ರಾದಲ್ಲಿ ಮುಕ್ತಾಯಗೊಂಡಿತು. ಪಂದ್ಯದುದ್ದಕ್ಕೂ ಸಂಪೂರ್ಣ ಮೇಲುಗೈ ಸಾಧಿಸಿದರೂ ಸ್ಪೇನ್ ತಂಡ ಗೋಲು ಗಳಿಸಲು
ವಿಫಲವಾಗಿದ್ದರಿಂದ ಪಂದ್ಯವು 0-0 ಗೋಲುಗಳ ಅಂತರದಲ್ಲಿ ಡ್ರಾ ಆಯಿತು. ಯೂರೋಪಿಯನ್ ಚಾಂಪಿಯನ್ಸ್ ಸ್ಪೇನ್ ಹಲವು ಬಾರಿ ಗೋಲು ಬಾರಿಸುವ ಪ್ರಯತ್ನ ನಡೆಸಿದರೂ ಕೇಪ್ ವರ್ಡಿ ತಂಡದ ಗೋಲ್ ಕೀಪರ್ ವೊಜಿನ್ಹಾ ರಕ್ಷಣಾತ್ಮಕ ಆಟದಿಂದ ಗೋಲು ಬಾರಿಸಲು ಸಾಧ್ಯವಾಗಲಿಲ್ಲ.
ಎಫ್ ಗ್ರೂಪ್ನ ಪಂದ್ಯದಲ್ಲಿ ಬಲಿಷ್ಠ ಸ್ವೀಡನ್ ತಂಡವು ಟುನೀಷಿಯಾ ತಂಡವನ್ನು 5-1 ಗೋಲುಗಳ ಅಂತರದಲ್ಲಿ ಪರಾಭವಗೊಳಿಸಿ ಶುಭಾರಂಭ ಮಾಡಿತು.








