ಸುಳ್ಯ:ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ವತಿಯಿಂದ ನಡೆಸಲ್ಪಡುತ್ತಿರುವ ಸುಲಭ ಕಂತು ಯೋಜನೆಯ ಬಂಪರ್ ಬಹುಮಾನದ 8ನೇ ಡ್ರಾ ಜೂನ್ 15 ರಂದು ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಶೋರೂಂನಲ್ಲಿ ನಡೆಯಿತು.ಕಾರ್ಡ್ ಸಂಖ್ಯೆ
S 2008 ಹೊಂದಿದ್ದ ಸೀತಾರಾಮ ಬೀನಡ್ಕ ಒಂದು ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ವಿಜೇತರಾದರು. ಅದೃಷ್ಟ ಡ್ರಾ ವಿಜೇತರ ಆಯ್ಕೆಯನ್ನು ಎಂ. ಬಿ.ಫೌಂಡೇಶನ್ನ ಅಧ್ಯಕ್ಷ ಎಂ.ಬಿ.ಸದಾಶಿವ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕೆವಿಜಿ ಐಪಿಎಸ್ ಸ್ಕೂಲ್ ಪ್ರಾಂಶುಪಾಲರಾದ ಅನಿಶ್ನಾದ್, ಪೆರಾಜೆ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕ ಲೋಕೇಶ್ ಹೊದ್ದೆಟ್ಟಿ, ಉದ್ಯಮಿ, ಲೋಕೇಶ್ ಚೌಟಾಜೆ, ತಿಲಕೇಶ್, ಸಂಸ್ಥೆಯ ಪಾಲುದಾರರು, ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.








