ಅಜ್ಜಾವರ: ಅಜ್ಜಾವರ ಅಡ್ಕದ ನಡೆದ ಝೖನ್ ಎಕ್ಸೆಲೆನ್ಸ್ ಫಾರ್ ಮೊರಲ್ ಎಜ್ಯುಕೇಶನ್ನ ಎಂಟನೇ ವಾರ್ಷಿಕ ಹಾಗೂ ಎರಡನೇ ಸನದುದಾನ ಸಮ್ಮೇಳನ ಎ.25ರಂದು ನಡೆಯಿತು. ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಿದ ಖ್ಯಾತ ವಾಗ್ಮಿ ನೌಶಾದ್ ಬಾಖವಿ ತಿರುವನಂತಪುರಂ ಮಾತನಾಡಿ ಝೈನ್ ಎಕ್ಸಲೆನ್ಸ್ ಪಾರ್ ಮೋರಲ್ ಎಜ್ಯುಕೇಶನ್ ವಿದ್ಯಾಸಂಸ್ಥೆಯ ಕಾರ್ಯ ಚಟುವಟಿಕೆ ಬಹಳ ಶ್ಲಾಘನೀಯವಾಗಿದೆ. ಇಂತಹ ಸಂಸ್ಥೆಗಳು ಬೆಳೆಯಲು ಸಮಾಜದ ಪ್ರತಿಯೊಬ್ಬರ ಪ್ರೋತ್ಸಾಹ ಅಗತ್ಯ ಎಂದು ಅವರು ಹೇಳಿದರು.ಮಹಿಳೆಯರ ಸಮನ್ವಯ ವಿಧ್ಯಭ್ಯಾಸ ಉನ್ನತಿಗಾಗಿ
ಎಸ್ಕೆಎಸ್ಎಸ್ಎಫ್ ಸುಳ್ಯದ ಅಡ್ಕ ಇರುವಂಬಳ್ಳ ಶಾಖೆ ಆರಂಭಿಸಿದ ಶಿಕ್ಷಣ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ಸಂಜೆ ನಡೆದ ಮಜ್ಲಿಸುನ್ನೂರ್ ಆತ್ಮೀಯ ಸಂಗಮ ಝೈನಿಯಾ ಚೆಯರ್ಮೆನ್ ಸಯ್ಯಿದ್ ಅಕ್ರಂ ಅಲೀ ತಂಙಳ್ ನೇತೃತ್ವದಲ್ಲಿ ನಡೆಯಿತು. ಸನದುದಾನ ಸಮ್ಮೇಳನದ ದುವಾಃ ನೇತೃತ್ವವನ್ನು ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ ವಹಿಸಿದ್ದರು.
ಈ ಸಂಧರ್ಭದಲ್ಲಿ ಸಂಸ್ಥೆಯಲ್ಲಿ ಕಲಿತು ಸನದುದಾನ ಸ್ವೀಕರಿಸಿದ ಸುಮಾರು 20 ವಿದ್ಯಾರ್ಥಿನಿಯರ ಪ್ರಮಾಣ ಪತ್ರವನ್ನು ಪೋಷಕರಿಗೆ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹಾಗೂ ಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸಿದ ಮುಖಂಡರುಗಳಾದ

ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ರಶೀದ್, ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು, ಲತೀಫ್ ಹಾಜಿ ಬೆಂಗಳೂರು, ಅಬ್ಬಾಸ್ ಹಾಜಿ ಮೊದಲಾದವರನ್ನು ಗೌರವಿಸಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು ಅಧ್ಯಕ್ಷತೆ ವಹಿಸಿದ್ದರು.ಪ್ರಧಾನ ಕಾರ್ಯದರ್ಶಿ ಮುಹಿಯ್ಯುದ್ದೀನ್ ಅನ್ಸಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಸಯ್ಯಿದ್ ಹಕೀಂ ತಂಙಳ್ ಆದೂರು, ಉಸ್ತಾದ್ ಶರೀಫ್ ಪೈಝಿ ಕಡಬ , ನಸೀಹ್ ದಾರಿಮಿ, ಸಂಸ್ಥೆಯ ಪ್ರಿನ್ಸಿಪಾಲ್ ಅಬ್ದುಲ್ಲಾ ನಿಝಾಮಿ, ಅಜ್ಜಾವರ ಖತೀಬರಾದ ಹಸೈನಾರ್ ಫೈಝಿ,ಮುಖಂಡರುಗಳಾದ ಟಿ ಎಂ ಶಹೀದ್ ತೆಕ್ಕಿಲ್,ರಶೀದ್ ಮಾಸ್ಟರ್, ಹಾಜಿ ಅಬ್ದುಲ್ ರಜಾಕ್ ರಾಜಧಾನಿ, ಹಾಜಿ ಕೆ ಎಂ ಎಸ್ ಮಹಮ್ಮದ್,ಹಾಜಿ ಅಬ್ದುಲ್ಲಾ ಕಟ್ಟೆಕ್ಕಾರ್ಸ್, ಜಿ.ಕೆ.ಹಮೀದ್ ಗೂನಡ್ಕ, ಸಿದ್ದಿಕ್ ಕೊಕ್ಕೊ, ಕೆ ಎಸ್ ಉಮ್ಮರ್, ಉಮ್ಮರ್ ದಾರಿಮಿ, ಯಹಿಯ್ಯಾ, ಇಕ್ಬಾಲ್ ಸುಣ್ಣಮೂಲೆ, ತಾಜ್ ಮಹಮ್ಮದ್, ಇಕ್ಬಾಲ್ ಬಾಳಿಲ, ಅಶ್ರಫ್ ಗುಂಡಿ, ಹಸೈನಾರ್ ಹಾಜಿ ಗೊರಡ್ಕ ಮತ್ತಿತರರು ಉಪಸ್ಥಿತರಿದ್ದರು.
ಸೌಹಾರ್ದ ಸಮ್ಮೇಳನ:
ಕಾರ್ಯಕ್ರಮದ ದ್ವಜಾರೋಹಣ ನೆರವೇರಿಸಿದ ಹಸೈನಾರ್ ಹಾಜಿ ಇರುವಂಬಳ್ಳ ಅಧ್ಯಕ್ಷತೆಯಲ್ಲಿ ನಡೆದ ಸೌಹಾರ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಹಿಯುದ್ದೀನ್ ಫೈಝಿ,ಹಿರಿಯ ಸಾಮಾಜಿಕ ಮುಖಂಡ ಧನಂಜಯ ಅಡ್ಪಂಗಾಯ, ರಂಜಿತ್ ರೈ ಮೇನಾಲ, ಸುಳ್ಯ ಸೂಡ ಅಧ್ಯಕ್ಷ ಕೆ.ಎಂ ಮುಸ್ತಫಾ ಜನತಾ, ಎ ಬಿ ಅಬ್ಬಾಸ್ ಅಡ್ಕ, ಗ್ರಾ. ಪಂ ಉಪಾಧ್ಯಕ್ಷ ಅಬ್ದುಲ್ಲಾ ಅಜ್ಜಾವರ ಮೊದಲಾದವರು ಭಾಗವಹಿಸಿದ್ದರು. ಝೈನಿಯಾ ಸ್ವಾಗತ ಸಮಿತಿ ವರ್ಕಿಂಗ್ ಕಾರ್ಯದರ್ಶಿ ಮಹಮ್ಮದ್ ಶಾಫೀ ದಾರಿಮಿ ಅಜ್ಜಾವರ ಸ್ವಾಗತಿಸಿದರು
ಝೈನಿಯಾ ಪ್ರ ಕಾರ್ಯದರ್ಶಿ ಮೊಹಿಯ್ಯದ್ದೀನ್ ಅನ್ಸಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಾಗತ ಸಮಿತಿ ಕನ್ವೀನರ್ ಸಿದ್ದೀಕ್ ಅಡ್ಕ ವಂದಿಸಿದರು. ಹಾಗೂ ಎಸ್ ಕೆ ಎಸ್ ಎಸ್ ಎಫ್ ಸಂಘಟನೆ,ವಿಖಾಯ ಸಂಘ ಸಮಿತಿಯ ಎಲ್ಲಾ ಸದಸ್ಯರು ಗಳು ಹಾಗೂ ಊರಿನ ಯುವಕರು ಸಹಕರಿಸಿದರು. ಸನದುದಾನಕ್ಕೆ ಪ್ರತ್ಯೇಕ ನಿರ್ಮಿಸಿದ ವೇದಿಕೆಯಲ್ಲಿ ವಿದ್ಯಾರ್ಥಿನಿಯರಿಗೆ ಅಸ್ಮಾ ಬೀವಿ ಕರಾವಳಿ, ಮುನೀರಾ ಬೀವಿ,ರಮ್ಲಾ ಬೀವಿ ಆದರು ಅವರು ಸನದುದಾನ ಹಾಗೂ ವಸ್ತ್ರವಿತರಣೆ ಮಾಡಿದರು.