ಬರ್ಮಿಂಗ್ಹ್ಯಾಮ್: ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ‘ಬದ್ಧ ಎದುರಾಳಿ’ ಪಾಕಿಸ್ತಾನ ತಂಡವನ್ನು 64 ರನ್ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದ ಭಾರತ ಶುಭಾರಂಭ ಮಾಡಿದೆ. ಸ್ಮೃತಿ ಮಂದಾನ ಅರ್ಧ ಶತಕ ಸಿಡಿಸಿದರೆ, ದೀಪ್ತಿ ಶರ್ಮ 5 ವಿಕೆಟ್ ಪಡೆದು ಮಿಂಚಿದರು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ
ಭಾರತ ತಂಡವು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ 17 ಓವರ್ಗಳಲ್ಲಿ 106 ರನ್ಗೆ ಆಲ್ ಔಟ್ ಆಯಿತು. ಪಾಕ್ ಪರ ವಿಕೆಟ್ ಕೀಪರ್ ಮುಬೀನ ಅಲಿ(41) ಹೊರತು ಪಡಿಸಿ ಉಳಿದವರು ವೈಫಲ್ಯ ಅನುಭವಿಸಿದರು. ಭಾರತದ ಪರ ದೀಪ್ತಿ ಶರ್ಮ 4 ಓವರ್ನಲ್ಲಿ ಕೇವಲ 10 ರನ್ ನೀಡಿ 5 ವಿಕೆಟ್ ಪಡೆದರೆ, ಶ್ರೀಚರಣಿ 3 ವಿಕೆಟ್ ಪಡೆದರು.ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರಕಲಿಲ್ಲ. ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಜೆಮಿಮಾ ರಾಡ್ರಿಗಸ್ 7 ಎಸೆತಗಳಲ್ಲಿ 1 ರನ್ ಗಳಿಸಿ ಔಟಾದರು.
18 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ಸ್ಮೃತಿ ಮಂದಾನ(68 ರನ್; 44 ಎಸೆತ) ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ ( 36 ರನ್; 35 ಎಸೆತ ) ಮೂರನೇ ವಿಕೆಟ್ಗೆ 91 ರನ್(63 ಎಸೆತ) ಜೊತೆಯಾಟವಾಡುವ ಮೂಲಕ ಆಸರೆಯಾದರು.
ರಿಚಾ ಘೋಷ್ (34 ರನ್: 17 ಎಸೆತ) ಹಾಗು ದೀಪ್ತಿ ಶರ್ಮಾ ( 12 ರನ್: 9 ಎಸೆತ) ಡೆತ್ ಓವರ್ನಲ್ಲಿ ಸ್ಪೋಟಕ ಆಟವಾಡುವ ಮೂಲಕ ತಂಡದ ಮೊತ್ತವನ್ನು 170ರ ಗಡಿ ಮುಟ್ಟಿಸಿದರು.
ಪಾಕಿಸ್ತಾನ ಪರ ಫಾತಿಮಾ ಸನಾ, ಸಾದಿಯಾ ಇಕ್ಬಾಲ್ ತಲಾ 2 ವಿಕೆಟ್ ಪಡೆದರು.















