ಕ್ರೈಸ್ಟ್ಚರ್ಚ್:ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ಮೊದಲ ಇನ್ನೀಂಗ್ಸ್ನಲ್ಲಿ ಭಾರತ ತಂಡದ ಅಗ್ರ ಕ್ರಮಾಂಕ ಕುಸಿಯಿತು. ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ನ್ಯೂಜಿಲೆಂಡ್, 356 ರನ್ ಗಳಿಸಿ ಆಲೌಟ್ ಆಗಿದೆ.ಇದಕ್ಕೆ ಪ್ರತಿಯಾಗಿ ಇನಿಂಗ್ಸ್ ಆರಂಭಿಸಿದ ಭಾರತ 116 ರನ್ ಗಳಿಸುವಷ್ಟರಲ್ಲೇ 6 ವಿಕೆಟ್ ಕಳೆದುಕೊಂಡಿದೆ.ಕಿವೀಸ್ ಪಡೆಯ ವೇಗಿಗಳ ಮುಂದೆ
ಇಂಡಿಯಾ ಬ್ಯಾಟಿಂಗ್ ಸರದಿ ತರಗೆಲೆಗಳಂತೆ ಕುಸಿಯಿತು.ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕೆ.ಎಲ್. ರಾಹುಲ್ ಹಾಗೂ ವಿಕೆಟ್ ಕೀಪರ್ ರಿಷಭ್ ಪಂತ್, ಅರ್ಧಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್, ದೇವದತ್ತ ಪಡಿಕ್ಕಲ್, ನಾಯಕ ಶುಭಮನ್ ಗಿಲ್ ಈ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದಾರೆ.
ಆರಂಭಿಕ ಜೈಸ್ವಾಲ್ ಸೊನ್ನೆ ಸುತ್ತಿದರೆ, ಅವರೊಂದಿಗೆ ಕ್ರೀಸ್ಗೆ ಇಳಿದ ರಾಹುಲ್ ಗಳಿಸಿದ್ದು 25 ರನ್ ಮಾತ್ರ. ನಂತರ ಬಂದ ಪಡಿಕ್ಕಲ್ (21 ರನ್), ಗಿಲ್ (17 ರನ್), ಪಂತ್ (23 ರನ್) ಹೆಚ್ಚು ರನ್ ಗಳಿಸಲಿಲ್ಲ. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (10 ರನ್) ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.ಇನಿಂಗ್ಸ್ ಹಿನ್ನಡೆಯಿಂದ ಪಾರಾಗಲು ಭಾರತಕ್ಕೆ ಇನ್ನೂ 240 ರನ್ ಬೇಕಿದೆ. 7 ರನ್ ಗಳಿಸಿರುವ ಧ್ರುವ ಜುರೇಲ್ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.ಜೇಮಿಸನ್ ಹಾಗೂ ಡಫಿ ತಲಾ ಎರಡು ವಿಕೆಟ್ ಉರುಳಿಸಿದರೆ, ಹೆನ್ರಿ ಹಾಗೂ ಸ್ಮಿತ್ ಒಂದೊಂದು ವಿಕೆಟ್ ಪಡೆದರು. ಮೊದಲ
ದಿನದಾಟದ ಅಂತ್ಯಕ್ಕೆ 246 ರನ್ ಗಳಿಸಿ ಐದು ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ 356 ರನ್ಗೆ ಸರ್ವಪತನ ಕಂಡಿತು. ಟಾಮ್ ಬ್ಲಂಡೆಲ್ (89) ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಅಕಾಶ್ ದೀಪ್ ಐದು ವಿಕೆಟ್ ಪಡೆದರು.

















