ಗಯಾನ: ಭಾನುವಾರ ಬೆಳಗ್ಗೆ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಯುಗಾಂಡ ವಿರುದ್ಧ ವೆಸ್ಟ್ ಇಂಡೀಸ್ 134 ರನ್ಗಳ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ
ವೆಸ್ಟ್ ಇಂಡೀಸ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 173 ರನ್ ಪೇರಿಸಿತು. ಚಾರ್ಲ್ಸ್ 44, ರಸೆಲ್ 30 ರನ್ ಗಳಿಸಿದರು. ಯುಗಾಂಡ ಪರ ಮಸಾಬಾ 2 ವಿಕೆಟ್ ಕಬಳಿಸಿದರು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಯುಗಾಂಡ 12 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದಕೊಂಡು 39 ರನ್ಗಳಿಸಿ ಸೋಲುಂಡಿತು.