ನ್ಯೂಯಾರ್ಕ್:ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ’ಡಿ‘ ಗುಂಪಿನಲ್ಲಿ ನೆದರ್ಲೆಂಡ್ ವಿರುದ್ಧ ನಾಲ್ಕು ವಿಕೆಟ್ಗಳಿಂದ ಜಯ ಸಾಧಿಸಿತು.ವೇಗಿ ಒಟ್ನಿಲ್ ಬಾರ್ಥ್ಮ್ಯಾನ್ (11ಕ್ಕೆ4) ಅಮೋಘ ಬೌಲಿಂಗ್ ಹಾಗೂ ಡೇವಿಡ್ ಮಿಲ್ಲರ್ (ಅಜೇಯ 59, 51ಎ) ಅರ್ಧಶತಕದ ನೆರವಿನಿಂದ
ಜಯ ಸಾಧಿಸಿತು.ನೆದರ್ಲೆಂಡ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ಗೆ 103 ರನ್ ಗಳಿಸಿತು. ಈ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಏಳು ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್ಗೆ 106 ರನ್ ಗಳಿಸಿತು.
ದಕ್ಷಿಣ ಆಫ್ರಿಕಾ ತಂಡ ಒಂದು ಹಂತದಲ್ಲಿ 12 ರನ್ಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತು. ಟ್ರಿಸ್ಟನ್ ಸ್ಟಬ್ಸ್ (33) ಹಾಗೂ ಡೇವಿಡ್ ಮಿಲ್ಲರ್ (ಅಜೇಯ 59) ಆಸರೆಯಾದರು. ಇದಕ್ಕೂ ಮುನ್ನ ವೇಗಿ ಒಟ್ನಿಲ್ ಬಾರ್ಥ್ಮ್ಯಾನ್ ದಾಳಿಗೆ ನೆದರ್ಲೆಂಡ್ಸ್ ತಂಡವು ಅಲ್ಪ ಮೊತ್ತಕ್ಕೆ ಕುಸಿಯಿತು. ಸೈಬ್ರ್ಯಾಂಡ್ ಇಂಗೆಲ್ಬ್ರೆಕ್ಟ್ (40; 45ಎ) ಬಿಟ್ಟರೆ ಉಳಿದ ಬ್ಯಾಟರ್ಗಳು ವೈಫಲ್ಯ ಅನುಭವಿಸಿದರು.