ಬ್ರಿಜ್ಟೌನ್: ಟಿ20 ವಿಶ್ವಕಪ್ ಪಂದ್ಯದ ‘ಬಿ’ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 36 ರನ್ಗಳ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 201 ರನ್ ಪೇರಿಸಿತು. ಆಸ್ಟ್ರೇಲಿಯಾ ಪರ
ಟ್ರಾವಿಸ್ ಹೆಡ್ 34, ಡೇವಿಡ್ ವಾರ್ನರ್ 39, ಮಿಚೆಲ್ ಮಾರ್ಷ್ 35, ಮಾರ್ಕ್ ಸ್ಟೋಯಿನ್ಸ್ 30 ರನ್ ಬಾರಿಸಿದರು. ಇಂಗ್ಲೆಂಡ್ ಪರ ಜೋರ್ಡನ್ 2 ವಿಕೆಟ್ ಪಡೆದರು.ಗುರಿ ಬೆನ್ನಟ್ಟಿದ ಇಂಗ್ಲೆಂಡ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿ ಸೋಲುಂಡಿತು.ಜೋಸ್ ಬಟ್ಲರ್ 42, ಫಿಲ್ ಸಾಲ್ಟ್ 37 ರನ್ ಗಳಿಸಿದರು. ಆಸೀಸ್ ಪರ ಆಡಂ ಜಂಪ, ಪ್ಯಾಟ್ ಕಮ್ಮಿನ್ಸ್ ತಲಾ 2 ವಿಕೆಟ್ ಪಡೆದರು.