ಮೇಪ್ಪಾಡಿ: ಭೂ ಕುಸಿತ ಸಂಭವಿಸಿದ ವಯನಾಡ್ ಜಿಲ್ಲೆಯ ಮೇಪ್ಪಾಡಿ ಗ್ರಾಮ ಪಂಚಾಯತ್ನ ವೆಲ್ಲರಿಪ್ಪಾರ, ಪುಂಚಿರಿಮಟ್ಟಂ, ಮುಂಡಕ್ಕಯ್, ಚೂರಲ್ಮಲ ಪ್ರದೇಶಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ನೇತೃತ್ವದ ತಂಡ ಭೇಟಿ ನೀಡಿ ವೀಕ್ಷಿಸಿದರು. ಸಂತ್ರಸ್ತರಿಗೆ ಸಹಾಯ
ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಕೆ ಎಸ್ ಎಸ್ ಎಫ್ ವಿಖಾಯ ತಂಡ ಎಸ್ ಎಸ್ ಎಫ್ ನ ಸಾಂತ್ವನ ತಂಡ ಸಹಿತ ಹಲವಾರು ಸಂಘಟನೆಯವರು ಅವಿರತವಾಗಿ ಶ್ರಮಿಸುತ್ತಿದ್ದು ಅವರನ್ನು ಭೇಟಿಯಾಗಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಕೆಪಿಸಿಸಿ ಕಾರ್ಯಾಧ್ಯಕ್ಷ ಟಿ ಸಿದ್ದಿಕ್, ಸುಲ್ತಾನ್ ಬತ್ತೆರಿ ಶಾಸಕ ಐ ಸಿ ಬಾಲಕೃಷ್ಣ ಮತ್ತಿತರ ಜೊತೆ ಚರ್ಚೆ ನಡೆಸಿದರು.