ಸುಳ್ಯ: ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸಭೆ ಆ.7ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ಮೋಹನ್ ಬೊಮ್ಮೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯರು ಪ್ರಾಸ್ತಾವಿಕ ಮಾತನಾಡಿದರು.ಬಳಿಕ
ಪಿ.ಬಿ.ಸುಧಾಕರ ರೈ,ಶಿವಪ್ರಸಾದ್ ಕೇರ್ಪಳ, ಕೆ.ಟಿ. ವಿಶ್ವನಾಥ್,
ನೂತನ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ಪಿ.ಬಿ. ಸುಧಾಕರ ರೈ, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಕೇರ್ಪಳ, ಕೋಶಾಧಿಕಾರಿಯಾಗಿ ಕೆ.ಟಿ. ವಿಶ್ವನಾಥ್, ಉಪಾಧ್ಯಕ್ಷರುಗಳಾಗಿ ಡಾ.ವೀಣಾ, ಹರೀಶ್ ರೈ ಉಬರಡ್ಕ, ಜತೆ ಕಾರ್ಯದರ್ಶಿಯಾಗಿ ವಿಜಯ ಕೆ., ನಿರ್ದೇಶಕರುಗಳಾಗಿ ಶರೀಫ್ ಜಟ್ಟಿಪಳ್ಳ, ಶಿವರಾಮ ಕೇನಾಜೆ, ದಿನೇಶ್ ಅಂಬೆಕಲ್ಲು, ಶಶಿಧರ ಎಂ.ಜೆ., ಅಶೋಕ್ ಪ್ರಭು, ಪೂರ್ಣಿನಾ ಟಿ, ಹೇಮಲತಾ ಆಯ್ಕೆಯಾದರು.