ಸುಳ್ಯ:ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಕಲ್ಮಡ್ಕದ ರಾಮನಗರದ ಶ್ರೀರಾಮ ಭಜನಾ ಮಂದಿರದ ಪಂಚವಟಿ ಸಭಾಭವನದಲ್ಲಿ ಎರಡು ದಿನಗಳ ಕಾಲ ನಡೆದ ವಿಪ್ರ ಸಮಾವೇಶ ಸಂಪನ್ನಗೊಂಡಿತು. ಸಮಾರೋಪ ಸಮಾರಂಭದಲ್ಲಿ 25 ಮಂದಿ ಹಿರಿಯ ವಿಪ್ರ ಸಾಧಕರನ್ನು ಸನ್ಮಾನಿಸಲಾಯಿತು. ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಾ.ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ ಅಧ್ಯಕ್ಷತೆಯಲ್ಲಿ ನಡೆದ
ಸಮಾರೋಪ ಸಮಾರಂಭದಲ್ಲಿ ಮಂಗಳೂರು ಕೋಟೆಕಾರು ಶ್ರೀ ಶೃಂಗೇರಿ ಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ, ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ, ಕರ್ನಾಟಕ ಬ್ಯಾಂಕ್ ಮುಖ್ಯ ಪ್ರಬಂಧಕರಾದ ಶ್ರೀಹರಿ ಪಿ, ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಉಪಸ್ಥಿತರಿದ್ದರು.

ಸಮಾವೇಷೋದ್ಘೋಷ:
ಸಮಾರೋಪಕ್ಕಿಂತ ಮುನ್ನ ಸಮಾವೇಷೋದ್ಘೋಷ ನಡೆಯಿತು. ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಭಟ್ ಕೊಡೆಂಕೇರಿ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷ ಅಶೋಕ್ ಹಾರ್ನಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯ ಹರಿಪ್ರಸಾಸ್ ಪೆರಿಯಪ್ಪು, ಪಂಜ ಸೀಮಾ ಗುರಿಕ್ಕಾರರಾದ ಸತ್ಯನಾರಾಯಣ ಮೊಗ್ರ, ಅದ್ವೈತ ಚಿಂತಕರಾದ ಕೆ.ಎನ್.ಪರಮೇಶ್ವರಯ್ಯ ಕಲ್ಮಡ್ಕ ಭಾಗವಹಿಸಿದ್ದರು. ಸುಳ್ಯ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಡಾ.ಬಾಲಸುಬ್ರಹ್ಮಣ್ಯ ಭಟ್ ಪಾಲೆಪ್ಪಾಡಿ, ಉಪಾಧ್ಯಕ್ಷ ಎಂ.ಎನ್.ಶ್ರೀಕೃಷ್ಣ ಸೋಮಯಾಗಿ, ಕಾರ್ಯದರ್ಶಿ ಕೃಷ್ಣ ರಾವ್ ನಾವೂರು, ಸತೀಶ್ ರಾವ್ ಐ.ಕೆ ದಾಸರಬೈಲು, ಸುಬ್ರಹ್ಮಣ್ಯ ಹೊಳ್ಳ ಎಂ.ಬೈತಡ್ಕ, ಈಶ್ವರ ಕುಮಾರ ಭಟ್ ಉಬರಡ್ಕ, ಅರುಣ್ ಕುಮಾರ್ ಎನ್, ಸಮಾವೇಶದ ಸಂಚಾಲಕ ಸಾಯಿನಾರಾಯಣ ಕಲ್ಮಡ್ಕ ಮತ್ತಿತರರು ಉಪಸ್ಥಿತರಿದ್ದರು.
ವಿಚಾರಗೋಷ್ಠಿ:
ಸಮಾವೇಶದ ಅಂಗವಾಗಿ ಡಿ.10ರಂದು ನಡೆದ ವಿಚಾರಗೋಷ್ಠಿಯಲ್ಲಿ
ಡಾ.ವೀಣಾ ಫಾಲಚಂದ್ರ ಅವರು ‘ಬ್ರಾಹ್ಮಣರಲ್ಲಿ ಆಚರಣೆ ಕುರಿತು ಮಾತನಾಡಿದರು. ಪ್ರಕಾಶ ಮೂಡಿತ್ತಾಯ ಅವರು ಶಿಕ್ಷಕನಾಗಿ ಬ್ರಾಹ್ಮಣ, ಗೀತಾ ಸರಳಾಯ ಅವರು ಶಾಸ್ತ್ರೀಯ ನೃತ್ಯ ವಿಷಯಗಳ ಬಗ್ಗೆ ವಿಚಾರ ಮಂಡಿಸಿದರು.ಬಳಿಕ ಸಮನ್ವಯ ಗೋಷ್ಠಿ ನಡೆಯಿತು.
‘ಸಮಾಜದಲ್ಲಿ ಯುವ ಬ್ರಾಹ್ಮಣರು’ ಎಂಬ ವಿಷಯಗಳ ಕುರಿತು ಕೃಷ್ಣ ರಾವ್, ವಿ.ಪಿ ಹೊಳ್ಳ, ಸುಧಾಕರ ನೆಟ್ಟಾರು ಇವರು ಮಾತನಾಡಿದರು. ಸುಬ್ರಾಯ ವಿ ಅಧ್ಯಕ್ಷತೆ ವಹಿಸಿದ್ದರು.
ಸಮಾವೇಶದಲ್ಲಿ ಸಮಾಜ ಬಾಂಧವರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಾದ್ಯ ಸಂಗೀತ ಗೋಷ್ಠಿ, ನೃತ್ಯಾರ್ಪಣಂ, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತ.













