ಸುಬ್ರಹ್ಮಣ್ಯ:ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಸುಬ್ರಹ್ಮಣ್ಯಕ್ಕೆ ಆಗಮಿಸಿದ ಸಚಿವರನ್ನು ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಪ್ರಮುಖರು ಸೇರಿ ಸ್ವಾಗತಿಸಿದರು. ಕ್ಷೇತ್ರದ ವಿವಿಧ

ಬೇಡಿಕೆಗಳ ಬಗ್ಗೆ ಶಾಸಕರು ಸಚಿವರಿಗೆ ಮನವಿ ಅರ್ಪಿಸಿದರು.ಇದಕ್ಕೂ ಮುನ್ನ ಧರ್ಮಸ್ಥಳಕ್ಕೆ ಬಂದ ಸಚಿವರು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಸಚಿವರನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗೌರವಿಸಿದರು.
ಬಳಿಕ ದೇವರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸದ ಸಚಿವರು ಭೋಜನದ ಬಳಿಕ ಸುಬ್ರಹ್ಮಣ್ಯಕ್ಕೆ ಪ್ರಯಾಣಿಸಿದರು.













