ಸುಳ್ಯ: ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು, ಇವರು ಮಾರ್ಚ್ 2026ರಲ್ಲಿ ನಡೆಸಿದ ಅಂತಿಮ ವರ್ಷದ ಎಂ.ಡಿ. /ಎಂ.ಎಸ್ಸ್ ಆಯುರ್ವೇದ ಪರೀಕ್ಷೆಯಲ್ಲಿ ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಅಂತಿಮ
ಸ್ನಾತಕೋತ್ತರ ವಿಭಾಗದ 5 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಚಿನ್ನದ ಪದಕದೊಂದಿಗೆ ರ್ಯಾಂಕ್ ಪಡೆದಿದ್ದಾರೆ.

ಭಾಗ್ಯವತಿ,ರೋಹಿತ್, ಭೂಮಿಕಾ,ಪ್ರತಿಭಾ,ಶ್ರೇಯಾ
ಪಂಚಕರ್ಮ ವಿಭಾಗದಲ್ಲಿ ಡಾ. ಭಾಗ್ಯವತಿ ಎಸ್. ಪ್ರಥಮ ರ್ಯಾಂಕ್, ರಸಶಾಸ್ತ್ರ ಬೈಷಜ್ಯ ಕಲ್ಪನಾ ವಿಭಾಗದಲ್ಲಿ ಡಾ. ಭೂಮಿಕಾ ಕೆ ಐದನೇ ರ್ಯಾಂಕ್, ಅಗದ ತಂತ್ರ ವಿಭಾಗದಲ್ಲಿ ಡಾ. ರೋಹಿತ್ ಕೆ. ಆರ್. ಮೂರನೇ ರ್ಯಾಂಕ್ ಹಾಗೂ ಡಾ. ಶ್ರೇಯಾ ಸಚಿನ್ ಚೌಗುಲೆ ಒಂಭತ್ತನೇ ರ್ಯಾಂಕ್ನ್ನು,
ಕಾಯಚಿಕಿತ್ಸಾ ವಿಭಾಗದಲ್ಲಿ ಡಾ. ಪ್ರತಿಭಾ ವೈ. ಚಕ್ರಸಾಲಿ ಆರ್., ಏಳನೇ ರ್ಯಾಂಕ್ನ್ನು ಪಡೆದಿರುತ್ತಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.






