ಸುಳ್ಯ:ಮಂಡ್ಯ ಹಾಗೂ ಮೈಸೂರುಗಳಲ್ಲಿ ಕಳೆದ ಮೂರು ದಶಕಗಳಿಂದ ಶಾಸ್ತ್ರೀಯ ನೃತ್ಯ ತರಬೇತಿ ನೀಡಿ ಸಾವಿರಾರು ಮಂದಿ ರಾಜ್ಯ, ರಾಷ್ಟ್ರ ಮಟ್ಟದ ಕಲಾವಿದರನ್ನು ಬೆಳೆಸಿದ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಇದೀಗ ಸುಳ್ಯ ತಾಲೂಕಿನ ಕನಕನಜಲು ಗ್ರಾಮದಲ್ಲಿ ಭರತನಾಟ್ಯ ತರಗತಿಗಳನ್ನು ಆರಂಭಿಸಲಾಗಿದೆ. ರಾಷ್ಟ್ರೀಯ ಮಟ್ಟದ
ಖ್ಯಾತ ಭರತನಾಟ್ಯ ಕಲಾವಿದೆ ಹಾಗು ನೃತ್ಯ ಗುರು ಡಾ. ಚೇತನಾ ರಾಧಾಕೃಷ್ಣ ಪಿ.ಎಂ.ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ತರಗತಿಗಳು ನಡೆಯಲಿದೆ. ಗುರುದೇವ್ ಅಕಾಡೆಮಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೃತ್ಯ ತರಬೇತಿ ಆರಂಭಿಸಬೇಕು ಎಂಬ ನಿರಂತರ ಬೇಡಿಕೆಯ ಹಿನ್ನಲೆಯಲ್ಲಿ ಕನಕಮಜಲಿನಲ್ಲಿ ಭರತನಾಟ್ಯ ತರಬೇತಿ ಆರಂಭಿಸಲಾಗಿದೆ. 2026-27 ನೇ ಸಾಲಿನ ಭರತನಾಟ್ಯ ತರಗತಿಗೆ ಪ್ರವೇಶಾತಿ ಆರಂಭಗೊಂಡಿದೆ. ಆಸಕ್ತರು ಸಂಪರ್ಕಿಸಬಹುದು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ. ಸುಳ್ಯ, ಪುತ್ತೂರು, ಕಾಸರಗೋಡು ಸೇರಿದಂತೆ ವಿವಿಧ ಭಾಗಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕನಕಮಜಲು ಕನಕಕಲಾ ಗ್ರಾಮ ಮೂರ್ಜೆ ಬಾಲವನದಲ್ಲಿ ಭರತನಾಟ್ಯ ತರಗತಿಗಳು ನಡೆಯಲಿದೆ.ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ, ಮಹಾರಾಷ್ಟ್ರ ಇವರೊಂದಿಗೆ

ಸಂಲಘ್ನತೆ ಪಡೆದಿರುವ ಪ್ರತಿಷ್ಠಿತ ಸಂಸ್ಥೆ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಶಾಸ್ತ್ರೀಯ ನೃತ್ಯ ಅಧ್ಯಯನ ಕ್ಷೇತ್ರದಲ್ಲಿ ನಂಬಿಕೆ ಮತ್ತು ಪರಂಪರೆಯನ್ನು ಉಳಿಸಿಕೊಂಡ ಸಂಸ್ಥೆ.1994ರಿಂದ 32 ವರ್ಷಗಳ ಅನುಭವದ ಪಯಣದಲ್ಲಿ ಸಾವಿರಾರು ಕಲಾವಿದರನ್ನು ಕಲಿಸಿ ಬೆಳೆಸಿದ ಸಂಸ್ಥೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜೊತೆಗೆ ಹಲವಾರು ರಾಷ್ಟ್ರ ಮಟ್ಟದ ನೃತ್ಯೋತ್ಸವಗಳನ್ನು ಸಂಯೋಜಿಸಿದ ಹೆಗ್ಗಳಿಕೆ ಗುರುದೇವ್ ಅಕಾಡೆಮಿಗೆ ಇದೆ.
ಹಿರಿಯ ಗುರು ಡಾ. ಚೇತನಾ ರಾಧಾಕೃಷ್ಣ ಪಿ ಎಂ ಅವರ ನೇತೃತ್ವದಲ್ಲಿ ಭರತನಾಟ್ಯ ತರಗತಿಗಳು ನಡೆಯುತ್ತದೆ.ಭರತನಾಟ್ಯ ವಿದ್ವತ್ನಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್, ಬಿ.ಎ. ಸಂಸ್ಕೃತ ಆರ್ಟ್ಸ್ – ಪ್ರಥಮ ರ್ಯಾಂಕ್ ಮತ್ತು ಚಿನ್ನದ ಪದಕ ವಿಜೇತೆ, ಎಂ.ಎ. ಸಂಸ್ಕೃತ ಎಂ.ಎ. ಭರತನಾಟ್ಯಂ, ಎ.ಎಚ್.ಡಿ., ಡಿ.ಲಿಟ್. ಪದವಿ ಪಡೆದಿದುವ ಹಿರಿಯ ಗುರು ಡಾ. ಚೇತನಾ ರಾಧಾಕೃಷ್ಣ ಪಿ.ಎಂ.ಅವರ ಸಮರ್ಥ ಮಾರ್ಗದರ್ಶನದಲ್ಲಿ
ಭರತನಾಟ್ಯದಲ್ಲಿ ಪರಿಣಿತ ತರಬೇತಿ,
ಪ್ರಮಾಣೀಕೃತ ಕೋರ್ಸ್ಗಳು ನಡೆಯಲಿದೆ. ಇವರ ಜೊತೆ ಅನುಭವಿ ಅಧ್ಯಾಪಕ ವೃಂದ ತರಬೇತಿ ನೀಡಲಿದ್ದಾರೆ.
ಪ್ರವೇಶಕ್ಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9535590287
9448383785













