ಚೆನ್ನೈ: ಶಾಲೆ, ದೇವಸ್ಥಾನ ಹಾಗೂ ಬಸ್ಸ್ಟಾಂಡ್ ಬಳಿಯಿರುವ 717 ಮದ್ಯದಂಗಡಿಗಳನ್ನು ಬಂದ್ ಮಾಡಲು ತಮಿಳುನಾಡಿನ ಸಿಎಂ ಜೋಸೆಫ್ ವಿಜಯ್ ಆದೇಶ ಮಾಡಿದ್ದಾರೆ.ಪೂಜಾ ಸ್ಥಳಗಳು, ಸಾರ್ವಜನಿಕ ಬಸ್ಸ್ಟಾಂಡ್ ಮತ್ತು ಶಿಕ್ಷಣ ಸಂಸ್ಥೆಗಳ 500 ಮೀಟರ್ ವ್ಯಾಪ್ತಿಯೊಳಗೆ
ಬರುವ 717 ಸರ್ಕಾರಿ ಸ್ವಾಮ್ಯದ ಟಿಎಎಸ್ಎಂಎಸಿ ಮದ್ಯದ ಚಿಲ್ಲರೆ ಮಾರಾಟ ಮಳಿಗೆಗಳನ್ನು ಎರಡು ವಾರದಲ್ಲಿ ಮುಚ್ಚಬೇಕೆಂದು ಆದೇಶಿಸಿದ್ದಾರೆ.ಗುರುತಿಸಲಾದ 717 ಚಿಲ್ಲರೆ ಮದ್ಯದ ಅಂಗಡಿಗಳಲ್ಲಿ, ಪೂಜಾ ಸ್ಥಳಗಳ ಬಳಿ 276 ಅಂಗಡಿಗಳು, ಶಿಕ್ಷಣ ಸಂಸ್ಥೆಗಳ ಬಳಿ 186 ಅಂಗಡಿಗಳು ಮತ್ತು ಬಸ್ ನಿಲ್ದಾಣಗಳ ಬಳಿ 255 ಅಂಗಡಿಗಳನ್ನು ಗುರುತಿಸಲಾಗಿದೆ.ಈ ಹಿಂದೆ ಸಾಕಷ್ಟು ಜನರಿಂದ ದೇವಸ್ಥಾನ, ಶಿಕ್ಷಣ ಸಂಸ್ಥೆಗಳ ಬಳಿ ಇರುವ ಮದ್ಯದ ಅಂಗಡಿಗಳನ್ನು ಮುಚ್ಚಿ ಎಂದು ಸರ್ಕಾರಕ್ಕೆ ಕರೆಗಳು ಬಂದಿದ್ದವು.ಇದನ್ನು ಗಮನಕ್ಕೆ ತೆಗೆದುಕೊಂಡ ಸಿಎಂ ವಿಜಯ್ ಎಲ್ಲವನ್ನೂ ಎರಡು ವಾರದಲ್ಲಿ ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ.











