ಬನಾರಿ:ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಕೀರಿಕ್ಕಾಡು ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆದ ಚಿಣ್ಣರ ಮೇಳ ಕಲಿಕಾ ಶಿಬಿರ ಸಮಾಪನಗೊಂಡಿತು. ಬನಾರಿ ಕೇಂದ್ರದ ನೃತ್ಯ ಗುರು ಸರೋಜಿನಿ ಬನಾರಿ ಮತ್ತು ರಂಗಭೂಮಿ ಕಲಾವಿದೆ ಸುಷ್ಮಿತಾ ಮೋಹನ್ ಅವರು ಕಲಾ ಮನೋವಿಕಾಸ ಮತ್ತು
ಮಕ್ಕಳ ಮನೋಸ್ಥೈರ್ಯ ವೃದ್ಧಿಯನ್ನು ಗುರಿಯಾಗಿಟ್ಟುಕ್ಕೊಂಡು ಆರು ದಿನಗಳ ಬೇಸಿಗೆ ಶಿಬಿರವನ್ನು ನಡೆಸಿಕೊಟ್ಟರು.ಯಕ್ಷಗುರು ವಿಶ್ವವಿನೋದ ಬನಾರಿ ಅವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಶಿಬಿರದಲ್ಲಿ ಸಂಘದ ಕಲಾವಿದರು ಮತ್ತು ಆಸಕ್ತ ಶಿಬಿರಾರ್ಥಿ ಮಕ್ಕಳ ಸಮ್ಮಿಲನದೊಂದಿಗೆ “ದಕ್ಷಾಧ್ವ್ರರ” ಯಕ್ಷಗಾನ ತಾಳಮದ್ದಳೆಯನ್ನು ಅಳವಡಿಸಲಾಗಿತ್ತು.ರಚನಾ ಚಿದ್ಗಲ್ ಮತ್ತು ಸಾಯಿ ನಕ್ಷತ್ರ ಮಜಿಕೋಡಿ ಅವರ ಭಾಗವತಿಕೆಗೆ ಮಂಡೆಕೋಲು ಅಪ್ಪಯ್ಯ ಮಣಿಯಾಣಿ, ವಿಷ್ಣು ಶರಣ ಬನಾರಿ, ನಾರಾಯಣ ಪಾಟಾಳಿ ಮಯ್ಯಾಳ, ಕೃಷ್ಣ ಪ್ರಸಾದ್ ಬೆಳ್ಳಿಪ್ಪಾಡಿ ಅವರು ಚೆಂಡೆ ಮದ್ದಳೆ ಚಕ್ರತಾಳದಲ್ಲಿ ಸಹಕರಿಸಿದರು.

ಅರ್ಥಧಾರಿಗಳಾಗಿ ಯಂ. ಬಾಲಕೃಷ್ಣ ಗೌಡ ಮುದಿಯಾರು,ರಮಾನಂದ ರೈ ದೇಲಂಪಾಡಿ, ವೀರಪ್ಪ ಸುವರ್ಣ ಬೆಳ್ಳಿಪ್ಪಾಡಿ, ಸಂಜೀವ ರಾವ್ ಮಯ್ಯಾಳ, ಪದ್ಮನಾಭ ಕೃಷ್ಣ ಸಿಂಧೂರ ಮಯ್ಯಾಳ, ಹಸ್ತ ಬೆಳ್ಳಿಪ್ಪಾಡಿ ಹಳೇಮನೆ, ಪ್ರತಿಮಾ ಸಾಲಿಯಾನ್ ಕಲ್ಲಡ್ಕ, ಸಂಜನಾ ರೆಂಜಾಳ, ಲಿಶ್ಮ ಬೆಳ್ಳಿಪ್ಪಾಡಿ, ಶ್ರಾವ್ಯಶ್ರೀ ಚೆಂಡೆಮೂಲೆ, ಪೃಥ ಕಟ್ಟಪುಣಿ ಸುಧೀರ್, ಮಾಸ್ಟರ್ ಸಚಿತ್ ಚೆಂಡಮೂಲೆ, ತಶ್ಮಿ ಬೆಳ್ಳಿಪ್ಪಾಡಿ ಹಳೆಮನೆ ಭಾಗವಹಿಸಿದರು.ಸ್ಥಳ ಸಾನಿಧ್ಯ ಶ್ರೀ ಗೋಪಾಲಕೃಷ್ಣ ದೇವರ ಪೂಜೆ, ಗೀತಾ ಪಾರಾಯಣ, ಸಾನಿಧ್ಯ ರೆಂಜಾಳರ ಭಾಗವತಿಕೆಯ ಪ್ರಥಮ ರಂಗಪ್ರವೇಶದೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಕೊನೆಗೆ ನಂದಕಿಶೋರ ಬನಾರಿ ವಂದನಾರ್ಪಣೆಗೈದರು.











