ಸುಳ್ಯ:ಸುಳ್ಯ ನಗರದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ತೆರಳುವ ರಸ್ತೆ ಕಾಮಗಾರಿ ಆರಂಭಗೊಂಡಿದ್ದು ಕಾಮಗಾರಿ ನಿರ್ವಿಘ್ನವಾಗಿ ನಡೆಯಲಿ ಎಂದು ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಸರ್ಕಾರದಿಂದ ಮಂಜೂರಾತಿಯಾದ 20 ಲಕ್ಷ ಹಾಗೂ ಸುಳ್ಯ ನಗರ ಪಂಚಾಯಿತಿ ವತಿಯಿಂದ ಕಾಯ್ದಿರಿಸಿದ 4 ಲಕ್ಷ ಹೀಗೆ
ಒಟ್ಟು 24 ಲಕ್ಷ ಅನುದಾನದ ಕಾಂಕ್ರೀಟ್ ಕಾಮಗಾರಿ ಮೇ.12ರಿಂದ ಆರಂಭಗೊಂಡಿದೆ. ಈ ಹಿನ್ನಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ವಿನಂತಿ ಮೇರೆಗೆ ಈ ದಿನ ಶ್ರೀ ಮಹಾವಿಷ್ಣುವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿಕೊಳ್ಳಲಾಯಿತು. ಕಾಮಗಾರಿ ಮಾಡುವ ನಿರ್ಮಿತಿ ಕೇಂದ್ರ, ನಗರ ಪಂಚಾಯತ್ ಹಾಗೂ ಮೆಸ್ಕಾಂ ಇಲಾಖೆಗಳ ಇಂಜಿನಿಯರ್ಗಳನ್ನು ಕೂಡ ಸ್ಥಳಕ್ಕೆ ಬರುವಂತೆ ವಿನಂತಿಸಿಕೊಂಡು ಸ್ಥಳ ಪರಿಶೀಲನೆ ಮಾಡಲಾಯಿತು.
ವಿದ್ಯುತ್ ಕಂಬ ಬದಲಾವಣೆ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲಾಯುತು.ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಸದಸ್ಯರಾದ ವಿಠಲ ಗೌಡ, ಜತ್ತಪ ರೈ, ಕುಸುಮಾವತಿ, ಶ್ರುತಿ ಸೂರ್ತಿಲ, ದೇವಸ್ಥಾನದ ಅರ್ಚಕರಾದ ನೀಲಕಂಠ, ನಿವೃತ್ತ ಅರಣ್ಯ ಇಲಾಖೆಯ ಅಧಿಕಾರಿ ಚೆನ್ನಪ್ಪ ಪೂಜಾರಿ, ಗಿರೀಶ್ ಡಿ.ಎಸ್, ಕಿಶೋರ್ ಕಾಯರ್ತ್ತೋಡಿ, ರತ್ನ, ಕುಸುಮಾಧರ, ಬಾಲಕೃಷ್ಣ, ದೇವಸ್ಥಾನದ ಮ್ಯಾನೇಜರ್ ಕುಸುಮಾಧರ, ಕುಶಾಲಪ್ಪ ಟೈಲರ್, ನಾಟ್ಯ ವಿಧೂಷಿ ಮಂಜುಶ್ರೀ, ಅಲ್ಲದೆ ನಿರ್ಮಿತಿ ಕೇಂದ್ರದ ರಕ್ಷಿತ್ ಮತ್ತು ಮೆಸ್ಕಾಂ ಎ. ಇ ಸುಪ್ರೀತ್ ಮತ್ತು ನಗರ ಪಂಚಾಯತ್ ಇಂಜಿನಿಯರ್ ವೆಂಕಟೇಶ್ ನಿಧಿ ಡಿ. ಎಸ್ ಮತ್ತಿತರು ಉಪಸ್ಥಿತರಿದ್ದರು.













