ಸುಳ್ಯ:ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಅಸೋಸಿಯೇಟ್ ಸೆಕ್ರೆಟರಿ ಸುಳ್ಯದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಮತ್ತು ಕ್ರೀಡಾ ಕ್ಷೇತ್ರ ದಲ್ಲಿ ಕಳೆದ ಹಲವು ದಶಕಗಳಿಂದ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಎನ್. ಜಯಪ್ರಕಾಶ್ ರೈ ಯವರಿಗೆ 70ರ ಹುಟ್ಟು ಹಬ್ಬದ ಸಂಭ್ರಮ. ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಆಶ್ರಯದಲ್ಲಿ
ಸುಳ್ಯದಲ್ಲಿ ನಡೆಯುತ್ತಿರುವ ವಾಲಿಬಾಲ್ ತರಬೇತಿ ಶಿಬಿರದಲ್ಲಿ ವಾಲಿಬಾಲ್ ಶಿಬಿರಾರ್ಥಿ ಗಳೊಂದಿಗೆ ಜಯಪ್ರಕಾಶ್ ರೈ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತುಈ ಸಂದರ್ಭದಲ್ಲಿ ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು,ಮೂಸಾ ಕುಂಞಿ ಪೈಂಬೆಚ್ಚಾಲ್, ಕೆ.ಎಂ. ಮಸ್ತಫ, ಎಸ್.ಸಂಶುದ್ದೀನ್,ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ್,ಭವಾನಿ ಶಂಕರ ಕಲ್ಮಡ್ಕ, ಗೋಕುಲ್ ದಾಸ್,ಕೆ. ಬಿ. ಇಬ್ರಾಹಿಂ, ನಿತಿನ್ ಗೂನಡ್ಕ, ಕೋಚ್ ಮನೋಜ್, ನವೀನ್, ಶಿವಕುಮಾರ್ ಕಂಡಡ್ಕ, ಶುಭಕರ್ ನಾಯಕ್, ಮೊದಲಾದವರು ಉಪಸ್ಥಿತರಿದ್ದರು











