ಸುಳ್ಯ:ಸುಳ್ಯ ವಕೀಲರ ಸಂಘದ ಅಧ್ಯಕ್ಷರಾಗಿ ಶ್ರೀಹರಿ ಕುಕ್ಕುಡೇಲು ಆಯ್ಕೆಯಾಗಿದ್ದಾರೆ.ವಕೀಲರ ಸಂಘದ ಅಧ್ಯಕ್ಷತೆಗೆ ಇಂದು ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶ್ರೀಹರಿ ಅಧ್ಯಕ್ಷರಾಗಿ ಆಯ್ಕೆಯಾದರು.ಅಧ್ಯಕ್ಷ ಸ್ಥಾನಕ್ಕೆ
ಶ್ರೀಹರಿ ಕುಕ್ಕುಡೇಲು ಹಾಗೂ ಜಗದೀಶ್ ಡಿ.ಪಿ. ಸ್ಪರ್ಧಿಸಿದ್ದರು. ಶ್ರೀಹರಿ ಕುಕ್ಕುಡೇಲು 54 ಮತ ಪಡೆದು ಗೆಲುವು ಸಾಧಿಸಿದರೆ, ಜಗದೀಶ್ ಡಿ.ಪಿ. 45 ಮತ ಪಡೆದರು. ಒಂದು ಮತ ಅಸಿಂಧು ವಾಗಿತ್ತು.
ಕಾರ್ಯದರ್ಶಿಯಾಗಿ ಕುಸುಮಾಧರ, ಉಪಾಧ್ಯಕ್ಷ ಹರ್ಷಿತ್ ಕಾರ್ಜ,ಕ್ರೀಡಾ ಕಾರ್ಯದರ್ಶಿಯಾಗಿ ವಿನೋದ್.ಎಸ್ ಸೇರಿ ವಿವಿಧ ಹುದ್ದೆಗಳಿಗೆ ಅವಿರೋಧ ಆಯ್ಕೆ ನಡೆದಿತ್ತು.








