ಬೆಂಗಳೂರು:’ನಮ್ಮ ಮೆಟ್ರೋ’ದ ನೂತನ ಗುಲಾಬಿ ಮಾರ್ಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದರು.ಸುದ್ದಗುಂಟೆ ಪಾಳ್ಯ.ಮೆಟ್ರೊ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ನಮ್ಮ ಮೆಟ್ರೊ ಗುಲಾಬಿ ಮಾರ್ಗಕ್ಕೆ ಪ್ರಧಾನಿ ಮೋದಿ ಹಾಗು
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿ ಚಾಲನೆ ನೀಡಿದರು. ಲೋಕಾರ್ಪಣೆಗೊಂಡ ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯಪಾಲರಾದ ಸುಧಾ ಯಾದವ್, ಸಚಿವ ಕೃಷ್ಣ ಬೈರೇಗೌಡ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರೊಂದಿಗೆ ಮೆಟ್ರೊದಲ್ಲಿ ಪ್ರಯಾಣ ಮಾಡಿದರು.ಕಾಳೇನ ಅಗ್ರಹಾರದಿಂದ ಎಸ್.ಜಿ.ಪಾಳ್ಯದವರೆಗೆ ಸುಮಾರು 7.5 ಕಿ.ಮೀ ಉದ್ದದ ಎಲಿವೇಟೆಡ್ ಮೆಟ್ರೊ ಮಾರ್ಗವು ನಾಳೆಯಿಂದಲೇ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಈ ಹೊಸ ಮಾರ್ಗದ
ಸೇರ್ಪಡೆಯೊಂದಿಗೆ ಬೆಂಗಳೂರಿನ ಒಟ್ಟು ಕಾರ್ಯಾಚರಣೆಯ ಮೆಟ್ರೋ ಜಾಲವು 103.6 ಕಿ.ಮೀಗೆ ವಿಸ್ತರಣೆಯಾಗಿದ್ದು,100 ಕಿ.ಮೀ ಗಡಿ ದಾಟುವ ಮೂಲಕ ದೆಹಲಿಯ ನಂತರ ದೇಶದ ಎರಡನೇ ಅತಿದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಿದೆ.
ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳ ಬಳಿಕ ಈಗ ‘ಗುಲಾಬಿ ಮಾರ್ಗ’ ನಮ್ಮ ಮೆಟ್ರೋ ಜಾಲಕ್ಕೆ ಹೊಸ ಶಕ್ತಿ ತುಂಬಿದೆ.














