ಸುಳ್ಯ:ಸುಳ್ಯದ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ದೀಪಾವಳಿ ಹಬ್ಬವನ್ನು ಸಂಭ್ರಮ, ಸಡಗರ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸಲಾಯಿತು. ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ದೀಪಾವಳಿ ಹಬ್ಬದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳಾದ
ಐಶಾನಿ ಹಾಗೂ ದಿಶಾನ್ ಟಿ.ಡಿ. ಅವರು ದೀಪಾವಳಿ ಹಬ್ಬದ ವಿಶೇಷತೆ ಕುರಿತು ಮಾತನಾಡಿದರು.ವಿದ್ಯಾರ್ಥಿಗಳು ದೀಪಾವಳಿಯ ಹಿನ್ನೆಲೆಯ ನೃತ್ಯರೂಪಕ, ಆಕರ್ಷಕ ನೃತ್ಯ ಹಾಗೂ ಹಾಡನ್ನು ಪ್ರಸ್ತುತ ಪಡಿಸಿದರು.ಅಮೇಯ ಯ ಭಾರದ್ವಾಜ್ ಹಾಗೂ ಹರಿಕೃಷ್ಣ ಪಿ. ಭಟ್ ಕಾರ್ಯಕ್ರಮ ನಿರೂಪಿಸಿದರು. ಅಥರ್ವ ವಂದಿಸಿದರು. ಶಿಕ್ಷಕಿಯರಾದ ಶ್ವೇತಾ ಹಾಗೂ ಸೌಮ್ಯ ಸಹಕರಿಸಿದರು. ಶಾಲಾ ಪ್ರಾಂಶುಪಾಲರಾದ ಅನಿಶ್ ನಾದ್ ಇ.ಎಂ. ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
































