ಸುಳ್ಯ:ಗ್ರಾಮ ಆಡಳಿತಾಧಿಕಾರಿಗಳ ರಾಜ್ಯಾದ್ಯಂತ ಅನಿರ್ದಿಷ್ಟಾವದಿ ಪ್ರತಿಭಟನೆ ನಡೆಸುತ್ತಿದ್ದು ಮೂರನೇ ದಿನವೂ ಮುಂದುವರಿದಿದೆ. ಸುಳ್ಯ ತಾಲೂಕು ಕಛೇರಿ ಮುಂಭಾಗದಲ್ಲಿ ಗ್ರಾಮ ಆಢಳಿತಾಧಿಕಾರಿಗಳ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ
ಲೋಕಾಯುಕ್ತ ಎಸ್ ಪಿ ನಟರಾಜ್ ಎಂ ಎ ಅಹವಾಲು ಸ್ವೀಕರಿಸಿದರು. ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ ಗಮನ ಸೆಳೆದು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಸರಕಾರಕ್ಕೆ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದರು. ಸಿಬ್ಬಂದಿಗಳಿಗೆ ಗ್ರಾಮಗಳ ಕೆಲವು ಕಡೆಗಳಲ್ಲಿ ಶೌಚಾಲಯದ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ, ಕಛೇರಿ , ಕಂಪ್ಯೂಟರ್ , ಪ್ರಿಂಟರ್ ಸೇರಿದಂತೆ ಇತರೆ ಸಮಾಗ್ರಿಗಳ ಕೊರತೆ ಬಗ್ಗೆ ಆಢಳಿತಾಧಿಕಾರಿಗಳು ಅಹವಾಲು ಸಲ್ಲಿಸಿದರು.