ಸುಳ್ಯ:ಭಾರತದ ಜನಗಣತಿ 2027ರ ಅಂಗವಾಗಿ ಮನೆಗಳ ಪಟ್ಟಿ ಮತ್ತು ಗಣತಿ ಕಾರ್ಯಕ್ಕೆ ಬರುವ ಗಣತಿದಾರರಿಗೆ ಸಾರ್ವಜನಿಕರು ಸಹಕಾರ ನೀಡಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ. ಏ.16ರಿಂದ ಮೇ.15ರ ತನಕ ಸುಳ್ಯ ತಾಲೂಕಿನಾದ್ಯಂತ ಮೊದಲ
ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ರೂಪದಲ್ಲಿ ನಡೆಯುತಿದೆ. ಈ ಸಮಯದಲ್ಲಿ ಗಣತಿದಾರರು ಪ್ರತೀ ಮನೆಗಳಿಗೆ ಭೇಟಿ ನೀಡಿ ಮೊಬೈಲ್ ಆಪ್ ಮೂಲಕ ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸುತ್ತಾರೆ.ಆದ್ದರಿಂದ ಸುಳ್ಯ ತಾಲೂಕಿನ ಸಾರ್ವಜನಿಕರು ಗಣತಿ ಕಾರ್ಯಕ್ಕೆ ಆಗಮಿಸುವ ಗಣತಿದಾರರಿಗೆ ಜನಗಣತಿ ಸಂಬಂಧ ಕೋರುವ ಮಾಹಿತಿಯನ್ನು ನೀಡುವಂತೆ ಹಾಗೂ ಈಗಾಗಲೇ SE (Self Enumeration) ಮಾಡಿದ್ದಲ್ಲಿ ಅದರ ಗುರುತಿನ ನಂಬ್ರವನ್ನು (SE-ID) ಗಣತಿದರರಿಗೆ ನೀಡಬೇಕು ಎಂದು ಪ್ರಕಟಣೆ ತಿಳಿಸಿದೆ.
















