ಸುಳ್ಯ:ಸುಳ್ಯ ತಾಲೂಕಿನಾದ್ಯಂತ ಏ.23ರಿಂದ ಮೇ.22ರವರೆಗೆ ಸುಮಾರು 30 ದಿನಗಳ ಕಾಲ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕಾ ಕಾರ್ಯಕ್ರಮ ನಡೆಯಲಿರುವುದರಿಂದ ತಾಲೂಕಿನ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ನಿರತರಾಗಿರುತ್ತಾರೆ. ಆದ್ದರಿಂದ ಸುಳ್ಶ ಪಶು ಆಸ್ಪತ್ರೆಯಲ್ಲಿ
ನಾಯಿ ಬೆಕ್ಕು ಮತ್ತು ಇತರ ಸಾಕು ಪ್ರಾಣಿಗಳ ದೈನಂದಿನ ಚಿಕಿತ್ಸಾ ಸೇವೆಯನ್ನು ಮಧ್ಯಾಹ್ನ 02 ರಿಂದ 4 ಗಂಟೆಯ ಒಳಗೆ ಮಾತ್ರ ನಿಗಧಿಪಡಿಸಲಾಗಿದೆ. (ಎರಡನೇ, ನಾಲ್ಕನೆಯ ಶನಿವಾರಗಳು, ರವಿವಾರ ಮತ್ತು ರಜಾ ದಿನಗಳಂದು ಬೆಳಿಗ್ಗೆ 9:00 ರಿಂದ ಮಧ್ಯಾಹ್ನ ಒಂದರವರೆಗೆ ಚಿಕಿತ್ಸಾ ಸೇವೆ ಲಭ್ಯವಿದೆ. ಈ ಅವಧಿಯಲ್ಲಿ ಹಸು ಎಮ್ಮೆ ಗಳ ತುರ್ತು ಚಿಕಿತ್ಸೆಗಾಗಿ ಇಲಾಖೆಯ ಪಶು ಸಂಜೀವಿನಿ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 1962 ಇದೆ ಎಂದುಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ತಿಳಿಸಿದ್ದಾರೆ.














