ನವದೆಹಲಿ:ಕೇಂದ್ರ ಬಜೆಟ್ ಇಂದು ಮಂಡಿಸಲಾಗುತ್ತದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟನೇ ಬಾರಿಗೆ ಬಜೆಟ್ ಮಂಡಿಸಲು ಅಣಿಯಾಗಿದ್ದಾರೆ. ಇಂದು ಬೆಳಿಗ್ಗೆ 11ಗಂಟೆಗೆ ಸಂಸತ್ನಲ್ಲಿ 2025–26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ.ಈ ಬಾರಿಯೂ ಕಾಗದ ರಹಿತ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದರು.ಬಜೆಟ್ ದಾಖಲೆಗಳನ್ನು ಹೊಂದಿದ ಟ್ಯಾಬ್ಲೆಟ್ನ್ನು ಸಚಿವರು ಪ್ರದರ್ಶಿಸಿದರು.