ಸುಳ್ಯ: ಸುಳ್ಯ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕಲ್ಲುಮುಟ್ಲುವಿನ ವೆಂಟೆಡ್ ಡ್ಯಾಮ್ನಲ್ಲಿ ನೀರು ಭರ್ತಿಯಾಗಿದೆ. ಮಳೆಗಾಲದಲ್ಲಿ ಪೂರ್ತಿಯಾಗಿ ತೆರೆಯಲಾಗಿದ್ದ ವೆಂಟೆಡ್ ಡ್ಯಾಮ್ನ ಷಟರ್ಗಳನ್ನು ಮೂರು ದಿನಗಳ ಹಿಂದೆ ಹಾಕಲಾಗಿತ್ತು. ಪಯಸ್ವಿನಿ ನದಿಯಲ್ಲಿ ನೀರಿನ ಒಳ ಹರಿವು ಇದ್ದು ಮೂರು ದಿನದಲ್ಲಿ
ಡ್ಯಾಮ್ ಭರ್ತಿಯಾಗಿದೆ. ನಾಲ್ಕು ಮೀಟರ್ ಎತ್ತರದಲ್ಲಿ ಡ್ಯಾಮ್ನಲ್ಲಿ ನೀರು ತುಂಬಿದ್ದು,ಇನ್ನು ನೀರು ತುಂಬಿ ಹರಿಯಲಿದೆ. ಡ್ಯಾಮ್ನ 12 ಷಟರ್ಗಳನ್ನು ಹಾಕಲಾಗಿದೆ. ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು 17 ಕೋಟಿ ಅನುದಾನದಲ್ಲಿ ಎರಡು ವರ್ಷಗಳ ಹಿಂದೆ ವೆಂಟೆಡ್ ಡ್ಯಾಮ್ ನಿರ್ಮಿಸಲಾಗಿತ್ತು.

ಚಿತ್ರಗಳು: ವಿನಯಕುಮಾರ್ ಕಂದಡ್ಕ
ಪಂಪ್ ಅಳವಡಿಕೆ ಪೂರ್ಣ:
ಕಲ್ಲುಮುಟ್ಲುವಿನ ಡ್ಯಾಮ್ ಸಮೀಪ ಪಯಸ್ವಿನಿ ನದಿ ದಡದಲ್ಲಿ ನಿರ್ಮಾಣ ಹಂತದಲ್ಲಿರುವ ನೂತನ ಜಾಕ್ವೆಲ್ನಲ್ಲಿ ಪಂಪ್ ಅಳವಡಿಸುವ ಕಾರ್ಯ ಪೂರ್ತಿಯಾಗಿದೆ. ಕುಡಿಯುವ ನೀರು ಸರಬರಾಜಿಗೆ ನೀರು ಪಂಪ್ ಮಾಡಲು 2.5 ಕೋಟಿ ಅನುದಾನದಲ್ಲಿ ನೂತನ ಜಾಕ್ವೆಲ್ ನಿರ್ಮಾಣ ಕಾರ್ಯ ನಡೆಯುತಿದೆ. ನಗರ ಪಂಚಾಯತ್ ಹಾಗೂ

ಒಳಚರಂಡಿ ಮಂಡಳಿ ಅನುದಾನದಲ್ಲಿ ಕಾಮಗಾರಿ ನಡೆಯುತಿದೆ. ಅಮೃತ್ 2 ಯೋಜನೆಯಡಿಯಲ್ಲಿ ಸುಳ್ಯ ನಗರದಲ್ಲಿ ಅನುಷ್ಠಾನವಾಗುತ್ತಿರುವ ಕುಡಿಯುವ ನೀರಿನ ಯೋಜನೆಯ ಶುದ್ದೀಕರಣ ಘಟಕ ಹಾಗೂ ಪೈಪ್ಲೈನ್ ಕಾಮಗಾರಿ ನಡೆಯುತ್ತಿದೆ.