ಚೆನ್ನೈ:ತಮಿಳುನಾಡು ಚುನಾವಣಾ ಕಣ ರಂಗೇರುತ್ತಿದ್ದು, ಬಿಜೆಪಿಯು ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ. ಮಾಡಿದೆ.ತಮಿಳುನಾಡಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ವಾರ್ಷಿಕ 3 ಉಚಿತ ಎಲ್ಪಿಜಿ ಸಿಲಿಂಡರ್ಗಳು ನೀಡುವುದಾಗಿ ಘೋಷಿಸಿದ್ದು, ಜೊತೆಗೆ
ಮಹಿಳಾ ಮನೆ ಮುಖ್ಯಸ್ಥರಿಗೆ ತಿಂಗಳಿಗೆ 2,000 ರೂ., ಪ್ರತಿ ಮನೆಗೆ ಒಂದು ಬಾರಿ 10,000 ರೂ. ನೀಡುವುದಾಗಿ ಭರವಸೆ ನೀಡಿದೆ. ಅದೇ ರೀತಿ ರೈತರಿಗೆ ಕೇಂದ್ರ ಸರಕಾರ ನೀಡುವ 6000 ಸಾವಿರ ಜೊತೆಗೆ ರಾಜ್ಯದಿಂದಲೂ 3,000 ರೂ. ಹೆಚ್ಚುವರಿ ಬೆಂಬಲ ನೀಡುವುದಾಗಿ ಘೋಷಿಸಿದೆ.ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ಮೇ 4ರಂದು ನಡೆಯಲಿದೆ.
















