ಸುಳ್ಯ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆರಾಜೆ ಸಮೀಪ ಪಾಲಡ್ಕದಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಕಾರಣ ವಾಹನ ಸಂಚಾರ ಅಸ್ತವ್ತಸ್ತಗೊಂಡ ಘಟನೆ ನಡೆದಿದೆ. ವಾಹನ ಸಂಚಾರಕ್ಕೆ ತಡೆ ಉಂಟಾಗಿ ಹಲವು ಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ
ತಡೆ ಉಂಟಾಗಿದೆ. ಮರದ ಗೆಲ್ಲುಗಳು ಪಿಕಪ್ ಒಂದರ ಮೇಲೆ ಬಿದ್ದಿದೆ. ಇದೀಗ ಮರವನ್ನು ತೆರವು ಮಾಡಲಾಗಿದ್ದು ವಾಹನ ಸಂಚಾರ ಪುನರಾರಂಭಗೊಂಡಿದೆ ಎಂದು ತಿಳಿದು ಬಂದಿದೆ. ಇಂದು ಸಂಜೆಯ ವೇಳೆಗೆ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು ಕೆಲವೆಡೆ ಗಾಳಿಯೂ ಬೀಸಿದೆ.