ಸುಳ್ಯ: ಇಡೀ ದಿನ ಪವರ್ ಕಟ್ ಬರೆ. 6 ಗಂಟೆಗೆ ಬರುವುದಾಗಿ ಹೇಳಿದ್ದ ವಿದ್ಯುತ್ ರಾತ್ರಿ ಒಂಭತ್ತು ಗಂಟೆ ಆದರೂ ವಿದ್ಯುತ್ ನಾಪತ್ತೆ. 33 ಕೆ.ವಿ. ಕಾವು- ಸುಳ್ಯ ಏಕಪಥ ಮಾರ್ಗವನ್ನು ಕೌಡಿಚ್ಚಾರಿನಿಂದ ಕಾವು ಜಂಕ್ಷನ್ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿ ನಡೆಯುವುದರಿಂದ ಸುಳ್ಯ ಉಪವಿಭಾಗ ವ್ಯಾಪ್ತಿಯ 33/11 ಕೆ.ವಿ. ಸುಳ್ಯ ವಿದ್ಯುತ್ ವಿತರಣಾ ಕೇಂದ್ರದಿಂದ
ಹೊರಡುವ ಎಲ್ಲಾ 11ಕೆ.ವಿ ಎಲ್ಲಾ ಫೀಡರ್ಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯ ತನಕ ವಿದ್ಯುತ್ ಕಡಿತ ಆಗಲಿದೆ ಎಂದು ಸುಳ್ಯ ಮೆಸ್ಕಾಂ ಪ್ರಕಟಣೆ ತಿಳಿಸಿತ್ತು. ಆದರೆ 6 ಗಂಟೆಗೆ ವಿದ್ಯುತ್ ಬರಲಿಲ್ಲ ಮಾತ್ರವಲ್ಲದೆ ರಾತ್ರಿ 8.45ಆದರೂ ವಿದ್ಯುತ್ ಬಂದಿಲ್ಲ. 33 ಕೆವಿ ವಿದ್ಯುತ್ ಲೈನ್ನಲ್ಲಿ ಫಾಲ್ಟ್ ಇರುವುದರಿಂದ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ ಎಂದು ಮೆಸ್ಕಾಂ ಇಂಜಿನಿಯರ್ಗಳು ಹೇಳುತ್ತಾರೆ. ಇಡೀ ಸುಳ್ಯದಲ್ಲಿ ಕತ್ತಲು ಆವರಿಸಿದೆ. ಇಡೀ ದಿನ ವಿದ್ಯುತ್ ಇಲ್ಲದ ಕಾರಣ ಹಲವೆಡೆ ನೀರಿಗೂ ಬವಣೆ ಎಎದುರಾಗಿದೆ.