ರಾಜ್ಕೋಟ್: ನಾಲ್ಕು ಮಂದಿ ಬ್ಯಾಟರ್ಗಳ ಅರ್ಧ ಶತಕದ ನೆರವಿನಿಂದ ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೃಹತ್ ಮೊತ್ತ ಪೇರಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 50 ಓವರ್ಗಳಲ್ಲಿ 7 ವಿಜೆಟ್ ನಷ್ಟಕ್ಕೆ
352 ರನ್ ದಾಖಲಿಸಿದೆ. ಆಸೀಸ್ ಪರ ಮಿಚೆಲ್ ಮಾರ್ಷ್ 96, ಡೇವಿಡ್ ವಾರ್ನರ್ 56, ಸ್ಟೀವನ್ ಸ್ಮಿತ್ 74, ಮಾರ್ನಸ್ ಲಾಬುಶೇನ್ 72 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತದ ಪರ ಜಸ್ಪೀತ್ ಬುಮ್ರಾ 3, ಕುಲ್ದೀಪ್ ಯಾದವ್ 2, ಮಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.
ಮೊದಲೆರಡು ಪಂದ್ಯಗಳಲ್ಲಿ ಜಯಿಸಿರುವ ಭಾರತ ಇದೀಗ ಆಸ್ಟ್ರೇಲಿಯಾದ ಎದುರು ಚಾರಿತ್ರಿಕ 3–0 ಸರಣಿ ಜಯ ಸಾಧಿಸುವ ತವಕದಲ್ಲಿದೆ.
ಮೊದಲೆರಡು ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸ್ಪಿನ್ನರ್ ಕುಲದೀಪ್ ಯಾದವ್ ಅವರು ತಂಡಕ್ಕೆ ಮರಳಿದ್ದಾರೆ.