ರಾಜ್ ಕೋಟ್: ಆಸ್ಟ್ರೇಲಿಯ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ 66 ರನ್ ಗಳ ಸೋಲು ಅನುಭವಿಸಿದೆ. 353 ರನ್ ಗಳ ಕಠಿಣ ಸವಾಲು ಪಡೆದ ಭಾರತ 286 ಕ್ಕೆ ಆಲೌಟ್ ಆಯಿತು. ಮೊದಲ ಎರಡು ಪಂದ್ಯ ಜಯಿಸಿದ್ದ ಭಾರತ 3 ಪಂದ್ಯಗಳ ಏಕದಿನ ಸರಣಿ 2-1 ಅಂತರದಲ್ಲಿ
ಗೆದ್ದುಕೊಂಡಿತು. ನಾಯಕ ರೋಹಿತ್ ಶರ್ಮ 81, ವಿರಾಟ್ ಕೊಹ್ಲಿ 56, ಶ್ರೇಯಸ್ ಅಯ್ಯರ್ 48 ರನ್ ಗಳಿಸಿ ಹೋರಾಟ ನಡೆಸಿದರೂ ಸೋಲನುಭವಿಸಿತು. ಆಸ್ಟ್ರೇಲಿಯಾ ಪರ ಗ್ಲೆನ್ ಮ್ಯಾಕ್ಸ್ವೆಲ್ 4 ವಿಕೆಟ್ ಪಡೆದರು. ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತು. ಆಸೀಸ್ ಪರ ಮಿಚೆಲ್ ಮಾರ್ಷ್ 96, ಡೇವಿಡ್ ವಾರ್ನರ್ 56, ಸ್ಟೀವನ್ ಸ್ಮಿತ್ 74, ಮಾರ್ನಸ್ ಲಾಬುಶೇನ್ 72 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಭಾರತದ ಪರ ಜಸ್ಪೀತ್ ಬುಮ್ರಾ 3, ಕುಲ್ದೀಪ್ ಯಾದವ್ 2, ಮಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣ ತಲಾ ಒಂದು ವಿಕೆಟ್ ಪಡೆದರು. ಶುಭಮನ್ ಗಿಲ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.