ಮುಂಬೈ:ಸಂಜು ಸ್ಯಾಮ್ಸನ್ ಅಮೋಘ ಶತಕದ (101*) ಹಾಗೂ ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 103 ರನ್ಗಳ ಬೃಹತ್ ಜಯ ದಾಖಲಿಸಿದೆ. ಚೆನ್ನೈ 20 ಓವರ್ಗಳಲ್ಲಿ
ಆರು ವಿಕೆಟ್ ನಷ್ಟಕ್ಕೆ 207 ರನ್ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಉತ್ತರಿಸಿದ ಮುಂಬೈ 19 ಓವರ್ಗಳಲ್ಲಿ104 ರನ್ಗೆ ಆಲ್ ಔಟ್ ಆಯಿತು. ಮುಂಬೈ ಪರ ತಿಲಕ್ ವರ್ಮ 37 ರನ್ ಹಾಗೂ ಸೂರ್ಯಕುಮಾರ್ ಯಾದವ್ 36 ರನ್ ಸೇರಿಸಿ ಕೊಂಚ ಪ್ರತಿರೋಧ ತೋರಿದರೂ, ಉಳಿದ ಬ್ಯಾಟರ್ಗಳು ಸಂಪೂರ್ಣ ವಿಫಲರಾದರು. ಚೆನ್ನೈ ಪರ ಅಕೇಲ್ ಹೊಸೈನ್ 4, ನೂರ್ ಅಹಮ್ಮದ್ 2 ವಿಕೆಟ್ ಪಡೆದರು.
ಟಾಸ್ ಸೋತು ಮೋದಲು ಬ್ಯಾಟಿಂಗ್ ನಡೆಸಿದ ಚೆನ್ನೈಗೆ ನಾಯಕ ಋತುರಾಜ್ ಗಾಯಕವಾಡ್ (22) ಹಾಗೂ ಸಂಜು ಸ್ಯಾಮ್ಸನ್ ಬಿರುಸಿನ ಆರಂಭವೊದಗಿಸಿದರು. ಆಧರೆ ಗಾಯಕವಾಡ್ 22 ರನ್ನಿಗೆ ಔಟ್ ಆಗಿ ನಿರಾಸೆ ಮೂಡಿಸಿದರು.ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ (14), ಶಿವಂ ದುಬೆ (5) ವೈಫಲ್ಯ ಅನುಭವಿಸಿದರು.
ಈ ನಡುವೆ ಡೆವಾಲ್ಡ್ ಬ್ರೆವಿಸ್ (21), ಕಾರ್ತಿಕ್ ಶರ್ಮಾ (18) ಹಾಗೂ ಜೆಮಿ ಓವರ್ಟನ್ ಉಪಯುಕ್ತ ಇನಿಂಗ್ಸ್ ಕಟ್ಟಿದರು.ಮತ್ತೊಂದೆಡೆ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶಿಸಿದ ಸಂಜು ಮುಂಬೈ ಬೌಲರ್ಗಳನ್ನು ದಂಡಿಸಿದರು. ಅಲ್ಲದೆ ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಎರಡನೇ ಶತಕದ ಸಾಧನೆ ಮಾಡಿದರು.ಇನಿಂಗ್ಸ್ನ ಕೊನೆಯ ಬಾಲ್ನಲ್ಲಿ ಶತಕ ಗಳಿಸಿದ ಸಂಜು, 54 ಎಸೆತಗಳಲ್ಲಿ 10 ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ 101 ರನ್ ಗಳಿಸಿ ಔಟಾಗದೆ ಉಳಿದರು.














