ಚೆನ್ನೈ: ಭಾರತದಿಂದ 2024 ರ ಆಸ್ಕರ್ ಪ್ರಶಸ್ತಿಗೆ ಸ್ಪರ್ಧಿಸಲು ಮಲಯಾಳಂ ಸಿನಿಮಾ ‘2018– ಎವರಿವನ್ ಇಸ್ ಎ ಹೀರೊ’ ಅಧಿಕೃತವಾಗಿ ಪ್ರವೇಶ ಪಡಿದಿದೆ. ಈ ವಿಷಯನ್ನು ಇಂದು ಚೆನ್ನೈನಲ್ಲಿ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಪ್ರಕಟಿಸಿತು. ಫೆಡರೇಷನ್ ಪರವಾಗಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಆಯ್ಕೆ ಸಮಿತಿ ಅಧ್ಯಕ್ಷ ಗಿರೀಶ್ ಕಾಸರವಳ್ಳಿ ಅವರು, 16 ಜನ ಜ್ಯೂರಿಗಳಿರುವ ತಂಡ 2018 ಸಿನಿಮಾವನ್ನು
ಅವಿರೋಧವಾಗಿ ಆಯ್ಕೆ ಮಾಡಿದೆ ಎಂದು ತಿಳಿಸಿದ್ದಾರೆ.
2024ರ ಆಸ್ಕರ್ ಪ್ರಶಸ್ತಿಯ ‘ಅತ್ಯುತ್ತಮ ಅಂತರರಾಷ್ಟ್ರೀಯ ವೈಶಿಷ್ಟ್ಯದ ಚಿತ್ರ’ ವಿಭಾಗಕ್ಕೆ 2018 ಸಿನಿಮಾವನ್ನು ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ. ಒಂದು ವಾರದಲ್ಲಿ ಆಯ್ದ 22 ಚಿತ್ರಗಳನ್ನು ವೀಕ್ಷಿಸಿ ಈ ಚಿತ್ರವನ್ನು ಆಯ್ಕೆ ಮಾಡಲಾಯಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರಗಳನ್ನು ಆಯ್ಕೆ ಮಾಡಲಾಗಿತ್ತು. ‘ಕೆಟ್ಟ ಪರಿಸ್ಥಿತಿಯಲ್ಲಿ ಭಾರತೀಯರು ಮತ್ತು ಅವರ ನೈತಿಕತೆಯನ್ನು ಈ ಸಿನಿಮಾ ಎತ್ತಿ ತೋರಿಸುತ್ತದೆ’ ಎಂದು ಹೇಳಿದರು. 2023 ರ ಮೇ 5 ರಂದು ಬಿಡುಗಡೆಯಾಗಿರುವ 2018 ಎಂಬ ಮಲಯಾಳಂ ಚಿತ್ರವನ್ನು ಜೂಡ್ ಆಂಟನಿ ಜೋಸೆಫ್ ನಿರ್ದೇಶನ ಮಾಡಿದ್ದಾರೆ. ಟೊವಿನೊ ಥಾಮಸ್, ಕುಂಜಾಕೋ ಬೋಬನ್, ಅಸಿಫ್ ಲಿ ತನ್ವಿ ರಾಮ್ ಪ್ರಮುಖ ತಾರಾಗಣದಲ್ಲಿದ್ದಾರೆ. ಕಮರ್ಷಿಯಲ್ ಆಗಿಯೂ ದೊಡ್ಡ ಯಶಸ್ಸು ಕಂಡಿರು ಚಿತ್ರ 2018 ರಲ್ಲಿ ಕೇರಳದಲ್ಲಿ ಉಂಟಾಗಿದ್ದ ಭಾರಿ ಪ್ರವಾಹದಲ್ಲಿ ಜನರ ಸೆಣಸಾಟ, ಮಾನವೀಯತೆ, ನೈತಿಕತೆ ಬಗೆಗಿನ ಕಥೆಯನ್ನು ಚಿತ್ರ ಹೊಂದಿದೆ. 2024 ನೇ ಸಾಲಿನ ಆಸ್ಕರ್ ಪ್ರಶಸ್ತಿ ವಿತರಣೆ ಸಮಾರಂಭ ಮುಂದಿನ ವರ್ಷ ಮಾರ್ಚ್ 10 ರಂದು ಲಾಸ್ ಏಂಜಲೀಸ್ನಲ್ಲಿ ಆಯೋಜನೆಗೊಂಡಿದೆ.