ಡಲ್ಲಾಸ್:ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಗೆ ಅಮೆರಿಕದಲ್ಲಿ ಭರ್ಜರಿ ಚಾಲನೆ ದೊರಕಿತು. ಗ್ರ್ಯಾಂಡ್ ಪ್ರಿಯರಿ ಕ್ರೀಡಾಂಗಣದಲ್ಲಿ ಕೆನಡಾ ವಿರುದ್ಧ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಟಾಸ್ ಗೆದ್ದಿರುವ ಅಮೆರಿಕ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.ಅಮೆರಿಕದ ನೆಲದಲ್ಲಿ ನಡೆಯುತ್ತಿರುವ ಚೊಚ್ಚಲ ಕ್ರಿಕೆಟ್ ವಿಶ್ವಕಪ್
ಪಂದ್ಯ ಇದಾಗಿದೆ. ಭಾರತೀಯ ಕಾಲಮಾನ ಭಾನುವಾರ ಬೆಳಿಗ್ಗೆ 6 ಗಂಟೆಗೆ ಪಂದ್ಯ ಆರಂಭವಾಗಿದೆ. ಭಾರತ ಮೂಲದ ಮೊನಾಂಕ್ ಪಟೇಲ್ ಅಮೆರಿಕ ತಂಡಕ್ಕೆ ಹಾಗೂ ಪಾಕಿಸ್ತಾನ ಮೂಲದ ಸಾದ್ ಬಿನ್ ಜಾಫರ್ ಅವರು ಕೆನಡಾ ಬಳಗಕ್ಕೆ ನಾಯಕತ್ವ ವಹಿಸಿದ್ದಾರೆ.ಈ ಎರಡೂ ತಂಡಗಳಲ್ಲಿ ಭಾರತ, ಪಾಕ್, ಇಂಗ್ಲೆಂಡ್ ಮತ್ತು ಸ್ಥಳೀಯ ಆಟಗಾರರು ಇದ್ದಾರೆ.ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅತಿಥೇಯ ಅಮೆರಿಕ ವಿರುದ್ಧ ನಡೆಯುತ್ತಿರುವ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿರುವ ಕೆನಡಾ 20 ಓವರ್ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿದೆ.
ಅಮೆರಿಕದ ನಾಯಕ ಮೊನಾಂಕ್ ಪಟೇಲ್ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಕೆನಡಾ ಪರ ಆರಂಭಿಕ ನವನೀತ್ ಧಲಿವಾಲ್ (61) ಹಾಗೂ ನಿಕೊಲಸ್ ಕಿರ್ಟನ್ (51) ಬಿರುಸಿನ ಅರ್ಧಶತಕ ಗಳಿಸಿ ಮಿಂಚಿದರು.ನವನೀತ್ 44 ಎಸೆತಗಳಲ್ಲಿ 61 ರನ್ ಗಳಿಸಿದರು. ಅವರ ಅಮೋಘ ಆಟದಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ಸೇರಿತ್ತು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಿಕೊಲಸ್ ಕೇವಲ 31 ಎಸೆತಗಳಲ್ಲಿ 51 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿ ಅಬ್ಬರಿಸಿದರು.ಆರಂಭಿಕ ಆ್ಯರನ್ ಜಾನ್ಸನ್ (23) ಹಾಗೂ ಶ್ರೇಯಸ್ ಮೊವ್ವಾ (ಅಜೇಯ 32, ಎಸೆತ 16) ಉಪಯುಕ್ತ ಕಾಣಿಕೆ ನೀಡಿದರು.