ಜಾಲ್ಸೂರು:ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಆಯನೂರ್ ಮಂಜುನಾಥ್, ಹಾಗೂ ಡಾ. ಕೆ.ಕೆ. ಮಂಜುನಾಥ್ ಕುಮಾರ್ ಪರವಾಗಿ ಜಾಲ್ಸೂರು ಜಿ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು. ವಿವಿಧ ಕಡೆ ಮತದಾರರನ್ನು
ಸಂಪರ್ಕಿಸಿ ಮತ ಯಾಚನೆ ಮಾಡಿದರು. ಪಯಸ್ವಿನಿ ಹೈಸ್ಕೂಲ್, ಹಿರಿಯ ಪ್ರಾಥಮಿಕ ಶಾಲೆ ಅಡ್ಕಾರ್, ಹಿರಿಯ ಪ್ರಾಥಮಿಕ ಶಾಲೆ ಪೇರಾಲು, ಅಜ್ಜಾವಾರ ಹೈಸ್ಕೂಲು, ಹಿರಿಯ ಪ್ರಾಥಮಿಕ ಶಾಲೆ ಅಡ್ಪoಗಾಯ, ಅಜ್ಜಾವಾರ ಶಾಲೆ, ಆಲೆಟ್ಟಿ ಪ್ರೌಢ ಶಾಲೆಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಾಯಿತು. ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗೆ ಪರಿಹಾರ, ನಿರುದ್ಯೋಗ ಭತ್ಯೆ ಕಾಂಗ್ರೆಸ್ನ ಕೊಡುಗೆಯಾಗಿದೆ. ಆದುದರಿಂದ ಪಕ್ಷದ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜ ಹಾಗೂ ಸುಳ್ಯ ಬ್ಲಾಕ್ ಚುನಾವಣೆ ಉಸ್ತುವಾರಿ ಪ್ರದೀಪ್ ಕುಮಾರ್ ರೈ ಪಾಂಬಾರ್, ಅರೆಭಾಷೆ ಅಕಾಡಮಿ ಅಧ್ಯಕ್ಷ ಸದಾನಂದ ಮಾವಜಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದ್ಯಸ ರಂಜಿತ್ ರೈ ಮೇನಾಲ ಸುಳ್ಯ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹಸೈನಾರ್ ಹಾಜಿ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯ ತೀರ್ಥರಾಮ ಜಾಲ್ಸೂರು, ಸುಳ್ಯ ಬ್ಲಾಕ್ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಅಧ್ಯಕ್ಷ ಅಬ್ಬಾಸ್ ಎ.ಬಿ ಮತ್ತಿತರರು ಉಪಸ್ಥಿತರಿದ್ದರು.